ಕೂಡಿಗೆ, ಆ. ೨೫: ಸೋಮವಾರಪೇಟೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಪಂದ್ಯಾವಳಿಯು ಕೂಡಿಗೆ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಿತು. ಉದ್ಘಾಟನೆಯನ್ನು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಕೆ. ಮಂಜಳಾ ನೆರವೇರಿಸಿ ಶುಭ ಹಾರೈಸಿದರು.

ಹಾಕಿ ಪಂದ್ಯಾವಳಿಯಲ್ಲಿ ಸೋಮವಾರಪೇಟೆಯ ಬಿ.ಟಿ.ಸಿ.ಜಿ ಕಾಲೇಜು, ಕುಶಾಲನಗರ ಅನುಗ್ರಹ ಕಾಲೇಜು, ಕೂಡಿಗೆ ಪದವಿಪೂರ್ವ ಕಾಲೇಜು ತಂಡಗಳು ಭಾಗವಹಿಸಿದ್ದವು. ಅವುಗಳಲ್ಲಿ ಅನುಗ್ರಹ ಕಾಲೇಜು ತಂಡ ಪ್ರಥಮ, ಕೂಡಿಗೆ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು.

ಈ ಸಂದರ್ಭದಲ್ಲಿ ಕೂಡಿಗೆ ಕಾಲೇಜು ಪ್ರಾಂಶುಪಾಲ ಬಸಪ್ಪ, ಉಪನ್ಯಾಸಕರಾದ ನಾಗಪ್ಪ, ಸತೀಶ್ ಕಾವೇರಮ್ಮ ರಮೇಶ್, ಹನುಮರಾಜ್, ರವೀಶ್, ಕ್ರೀಡಾ ಶಾಲೆಯ ಹಾಕಿ ತರಬೇತುದಾರ ವೆಂಕಟೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.