ವೀರಾಜಪೇಟೆ, ಆ. ೨೫ : ರಕ್ಷಾ ಬಂಧನ ಹಬ್ಬ ಎಲ್ಲಾ ಹಬ್ಬಗಳಿಗಿಂತ ವಿಶಿಷ್ಟವಾದ ಹಬ್ಬವಾಗಿದೆ. ಇದು ಭಾರತದ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಅಧ್ಯಾತ್ಮಿಕ ರಹಸ್ಯಗಳನ್ನು ಹೊಂದಿರುವ ಪರಮಾತ್ಮನ ಪ್ರೀತಿಯ ಕೊಡುಗೆಯಾಗಿದೆ ಎಂದು ಮಡಿಕೇರಿಯ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದ ರಾಜಯೋಗಿನಿ ಗಾಯತ್ರಿ ಅವರು ಹೇಳಿದರು.
ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿದ ಅವರು ತಮ್ಮ ಹಿತವಚನದಲ್ಲಿ ರಕ್ಷಾ ಬಂಧನವು ಸಾರ್ವತ್ರಿಕ ಸಹೋದರ ಸಹೋದರಿಯರ ಸಂಬAಧವನ್ನು ಗಟ್ಟಿಗೊಳಿಸುತ್ತದೆ. ಬಲಗೈಗೆ ರಾಖಿಯನ್ನು ಕಟ್ಟುವುದರಿಂದ ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ಮಾನವ ಜನಾಂಗದ ರಕ್ಷಣೆಗಾಗಿ ಪ್ರೇರಣೆ ನೀಡುತ್ತದೆ ಮತ್ತು ಮನುಷ್ಯನ ಮನಸ್ಸು ಶುದ್ಧೀಕರಣ ಮಾಡುತ್ತದೆ ಎಂದು ನುಡಿದರು.
ಬ್ರಹ್ಮಕುಮಾರೀಸ್ ಮಡಿಕೇರಿ ಕೇಂದ್ರದ ಧನಲಕ್ಷಿö್ಮಅಕ್ಕ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ರಕ್ಷ ಬಂಧನ ಕಾರ್ಯವನ್ನು ಸುಮಾರು ೫೦ ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದ್ದೇವೆ. ಇದರಿಂದ ಪ್ರೀತಿ ಗೌರವ ಮನಸ್ಸಿನಲ್ಲಿರುವ ದುಃಖಗಳನ್ನು ಹೋಗಲಾಡಿಸಿ ಸುಖ ಶಾಂತಿ ನೆಮ್ಮದಿಯನ್ನು ಭಗವಂತನು ಕರುಣಿಸಲಿ ಮತ್ತು ಉತ್ತಮ ಸಂದೇಶದ ರೂಪದಲ್ಲಿ ರಾಖಿಯನ್ನು ಕಟ್ಟಲಾಗುತ್ತದೆ. ಇದು ಸಹೋದರ ಸಹೋದರಿಯರ ಸಂಬAಧ ಗಟ್ಟಿ ಗೊಳಿಸುತ್ತದೆ ಎಂದರು.
ಅತಿಥಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜೋತಿ ಅವರು ಮತ್ತು ರೋಟರಿ ಶಾಲೆಯ ಮುಖ್ಯೋಪಧ್ಯಾಯರಾದ ಎಚ್.ಜೆ.ವಿಶಲಾಕ್ಷಿ ಅವರುಗಳು ಸಭೆಯನ್ನುದ್ದೇಶಿಸಿ ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿದರು, ಕೇಂದ್ರದ ಮುಖ್ಯ ಸಂಚಾಲಕಿ ಬಿ.ಕೆ.ಕೋಮಲಕ್ಕ ಅವರು ಸ್ವಾಗತಿಸಿ ಶ್ರೀ ಕೃಷ್ಣನ ಮಹತ್ವ ನಡೆದು ಬಂದ ಹಾದಿ ಆಧ್ಯಾತ್ಮಿಕವಾಗಿ ಸಭೆಗೆ ತಿಳಿಸಿದರು. ಬ್ರಹ್ಮಕುಮಾರಿ ವಿದ್ಯಾಲಯದ ನಿವೃತ್ತ ಕರ್ನಾಲ್ ಕರುಂಬಯ್ಯ ಅವರು ವಂದಿಸಿದರು.