ಮಡಿಕೇರಿ, ಆ. ೨೫ : ಎಲ್ಲಾ ಸರ್ಕಾರಿ ನೌಕರರು ಹಾಗೂ ನಿವೃತ್ತ ಸರ್ಕಾರಿ ನೌಕರರಿಗಾಗಿ ಪರಿಷ್ಕöÈತ ೭ನೇ ವೇತನ ಜಾರಿಯ ಸಂದರ್ಭ ಉಂಟಾಗಿರುವ ವೇತನ ತಾರತಮ್ಯವನ್ನು ಸರ್ಕಾರ ತಕ್ಷಣ ಸರಿಪಡಿಸಬೇಕೆಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಎಸ್. ಜನಾರ್ಧನ್, ೭ನೇ ವೇತನ ಜಾರಿ ಸ್ವಾಗತಾರ್ಹ ಕ್ರಮವಾಗಿದೆ. ಆದರೆ ನಿವೃತ್ತ ನೌಕರರಿಗೆ ಕೆಲವು ಸೌಲಭ್ಯಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸೇವೆಯಲ್ಲಿರುವ ನೌಕರರಿಗೆ ನೀಡುವ ಸೌಲಭ್ಯಗಳನ್ನೇ ನಿವೃತ್ತÀರಿಗೂ ನೀಡಬೇಕೆಂದು ಆಗ್ರಹಿಸಿದರು.

ಪರಿಷ್ಕöÈತ ವೇತನ ಶ್ರೇಣಿಗಳಲ್ಲಿ ನಿಗÀದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದ ಪುನರ್ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರನ ಪಲಾನುಭವಿಗಳಿಗೆ ೨೦೨೪ ಆ.೧ ರಿಂದ ಲಭಿಸಬೇಕು. ಆದರೆ ೨೦೨೨ ಜು.೧ರಿಂದ ೨೦೨೪ ಜು.೩೧ರವರೆಗೆ ಅಂದರೆ ಕಳೆದ ೨೫ ತಿಂಗಳ ಅವಧಿಯಲ್ಲಿ ನಿವೃತ್ತರಾದ, ನಿಧನ ಹೊಂದಿದ ಅಧಿಕಾರಿ ಹಾಗೂ ನೌಕರನಿಗೆ ಪರಿಷ್ಕöÈತ ವೇತನದನ್ವಯ ಡಿ.ಸಿ.ಆರ್.ಜಿ, ಕಮ್ಯೂಟೇಷನ್, ರಜೆ ನಗದೀಕರಣ ಲೆಕ್ಕಚಾರ ಮಾಡದೆ ಹಳೆಯ ವೇತನ ಶ್ರೇಣಿಯ ಮೇಲೆಯೇ ಪರಿಗಣಿಸುತ್ತಿರುವುದು ನಮಗೆ ಆಘಾತವನ್ನು ಉಂಟುಮಾಡಿದೆಯೆAದು ಹೇಳಿದರು.

೨೦೨೨ ಜು. ೧ ರಿಂದ ನಿವೃತ್ತಿ ವೇತನದ ಸೌಲಭ್ಯ ನೀಡಿದಂತೆ ೭ನೇ ವೇತನ ಆಯೋಗದ ವರದಿಯಂತೆ ಪರಿಷ್ಕöÈತ ವೇತನದಲ್ಲಿ ನಿವೃತ್ತಿಯ ಆರ್ಥಿಕ ಉಪ ದಾನಗಳ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿದ್ದೇವೆ. ನಿವೃತ್ತಿ ವೇತನದ ವ್ಯತ್ಯಾಸದ ಬಾಕಿಯನ್ನು ನಾವು ಕೇಳುತ್ತಿಲ್ಲ. ಬದಲಿಗೆ ೭ನೇ ವೇತನ ಆಯೋಗದ ವರದಿ ಪ್ರಕಾರ ಪರಿಷ್ಕöÈತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ, ಕಮ್ಯೂಟೇಷನ್ ಮತ್ತು ರಜೆ ನಗದೀಕರಣ ನೀಡಬೇಕು ಎಂದರು.

ಸರ್ಕಾರ ನಿವೃತ್ತ ನೌಕರರಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಅರ್ಥ ಮಾಡಿಕೊಂಡು ಪರಿಷ್ಕöÈತ ಮೂಲ ವೇತನದ ಮೇಲೆ ಡಿ.ಸಿ.ಆರ್.ಜಿ, ಕಮ್ಯೂಟೇಷನ್ ಮತ್ತು ರಜೆ ನಗದೀಕರಣ ಲೆಕ್ಕಾಚಾರ ಮಾಡಿ ನ್ಯಾಯೋಚಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ಮಂಜೂರು ಮಾಡಬೇಕೆಂದು ಪಿ.ಎಸ್. ಜನಾರ್ಧನ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜಿ.ಎಂ.ಚಿನ್ನಯ್ಯ, ಪ್ರಧಾನ ಕಾರ್ಯದರ್ಶಿ ಸುಕ್ರು ದೇವು ಗೌಡ, ಸೋಮವಾರಪೇಟೆ ತಾಲೂಕು ಸಂಚಾಲಕರುಗಳಾದ ಎ.ಎಂ.ಆನAದ ಹಾಗೂ ಚಾವಡಿ ಶಿವಕುಮಾರ್ ಉಪಸ್ಥಿತರಿದ್ದರು.