ನಿಷ್ಠೆ, ನಿಯತ್ತು., ನಂಬಿಕೆಗೆ ಮತ್ತೊಂದು ಹೆಸರೇ ನಾಯಿ., ಪುಟ್ಟದಿರುವಾಗ ಕುಂಯ್ ಕುಂಯ್ ಅಂತ., ದೊಡ್ಡದಾದ ಮೇಲೆ ಬೌ ಬೌ ಅಂತ ಅಡಿಗಡಿಗೆ ಎಡತಾಕುತ್ತಾ ಪ್ರೀತಿ ತೋರುತ್ತಾ ಬೇಕು ಬೇಡಿಕೆ ಗಳನ್ನು ಈಡೇರಿಸಿಕೊಳ್ಳುವ ಮುಗ್ಧ ಪ್ರಾಣಿ., ಸಾಮಾನ್ಯವಾಗಿ ಎಲ್ಲರೂ ನಾಯಿ ಸಾಕುತ್ತಾರೆ., ಮನೆಯ ಕಾವಲಿಗಾಗಿ, ಏಕಾಂತ ಕಳೆಯಲು., ಸಂತೋಷಕ್ಕಾಗಿ., ಕೆಲವರು ಬೇಟೆಗಾಗಿ ನಾಯಿಗಳನ್ನು ಸಾಕಿದರೆ., ಇನ್ನೂ ಕೆಲವರಿಗೆ ನಾಯಿ ಸಾಕುವದೇ ಹವ್ಯಾಸವಾಗಿದೆ. ಮನೆಯಲ್ಲೆ ಸಾಕುವ ನಾಯಿಗಳು ಆ ಮನೆಯ ಒಂದು ಭಾಗವಾಗಿ ಬಿಡುತ್ತವೆ. ಆಟ., ಊಟದೊಂದಿಗೆ ಕೆಲವರಿಗೆ ವಾಯು ವಿಹಾರಕ್ಕೆ ತೆರಳಲು ಸಂಗಾತಿಗಳಾದರೆ, ಇನ್ನೂ ಕೆಲವರಿಗೆ ಅಂಗಡಿಗಳಿAದ ಹಾಲು, ಪೇಪರ್, ಸಾಮಗ್ರಿಗಳನ್ನು ತರಲು ಸಹಚರರಾಗುತ್ತವೆ., ಬುದ್ಧಿ ಕಲಿಸಿದರೆ ಕೃಷಿ ಕಾರ್ಯಗಳಲ್ಲೂ ನೆರವಾಗುತ್ತವೆ. ಸೇನೆ., ಪೊಲೀಸ್ ಇಲಾಖೆಗಳಲ್ಲಿ ಪತ್ತೆದಾರನಾಗಿಯೂ ಕಾರ್ಯ ನಿರ್ವಹಿಸುತ್ತವೆ. ಮನುಷ್ಯನ ಅತ್ಯಂತ ಆತ್ಮೀಯ ಒಡನಾಡಿಗಳಲ್ಲೊಂದಾದ ಈ ನಾಯಿಯ ಬಗ್ಗೆ ಅರಿವು ಮೂಡಿಸುವದು, ಜಾಗೃತಿ ಮೂಡಿಸುವ ಸಲುವಾಗಿ ಆಗಸ್ಟ್ ೨೬ ರಂದು ವಿಶ್ವ ನಾಯಿ ದಿನವನ್ನು ಆಚರಿಸಲಾಗುತ್ತದೆ. ಅಮೇರಿಕಾದ ಪ್ರಾಣಿ ತಜ್ಞರಾದ ಕೊಲ್ನ್ ಪೈಗೆ ಎಂಬವರು ೨೦೦೪ರಲ್ಲಿ ನಾಯಿ ಯೊಂದನ್ನು ದತ್ತು ಪಡೆದು ಅದಕ್ಕೆ ಶೆಲ್ಟಿ ಎಂಬ ಹೆಸರನ್ನಿತ್ತು ಸಾಕಿ, ಸಲಹಿದ ಕುರುಹಾಗಿ ಈ ದಿನವನ್ನು ವಿಶ್ವ ನಾಯಿ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮನುಷ್ಯ ಹಾಗೂ ನಾಯಿಗಳ ಸಂಬAಧ ಸಹಸ್ರಾರು ವರ್ಷಗಳ ಹಿಂದಿನದ್ದು. ಜಗತ್ತಿನಲ್ಲಿ ಮನುಜ ಮೊದಲು ಸಾಕಿದ ಪ್ರಾಣಿ ಎಂದರೆ ಅದು ನಾಯಿ ಎಂದು ಹೇಳಲಾಗುತ್ತದೆ. ಶಿಲಾಯುಗದ ಅವಧಿಯಲ್ಲೇ ಮಾನವ ನಾಯಿಗಳನ್ನು ಬೇಟೆಗಾಗಿ ಸಲಹುತ್ತಿದ್ದ ಎಂದು ತಿಳಿದು ಬರುತ್ತದೆ. ಬರ ಬರುತ್ತಾ ನಾಯಿ ಮನುಷ್ಯನ ಸಂಗಾತಿಯೇ ಆಗಿಬಿಟ್ಟಿದೆ ಎಂದರೆ ತಪ್ಪಾಗಲಾರದು. ಇತ್ತೀಚೆಗಂತೂ ನಾಯಿ ಸಾಕುವದೇ ಒಂದು ಶೋಕಿಯೂ ಆಗಿಬಿಟ್ಟಿದೆ. ಅದಕ್ಕೆ ತಕ್ಕಂತೆ ವಿವಿಧ ರೀತಿಯ ಚಂದದ ನಾಯಿಗಳ ತಳಿಗಳನ್ನು ಆವಿಷ್ಕಾರ ಮಾಡಲಾಗಿದೆ.
ಕರುಣಾಮಯಿ ಪ್ರಾಣಿ
ಮಾಂಸಾಹಾರಿಯಾಗಿರುವ ನಾಯಿಗಳನ್ನು ಪ್ರೀತಿಯಿಂದ ಸಾಕಿ ಸಲಹಿದರೆ ಎಲ್ಲ ರೀತಿಯ ಆಹಾರವನ್ನೂ ಸೇವಿಸುತ್ತದೆ. ಉದ್ದ ಮೂತಿ, ಚೂಪಾದ ಕೋರೆ ಹಲ್ಲು ಗಳನ್ನು ಹೊಂದಿರುವ ನಾಯಿಗಳಲ್ಲಿ ಕ್ರೂರತನವಿದ್ದರೂ ಅವುಗಳನ್ನು ಮುದ್ದಾಡುತ್ತಾ ಸಾಕಿದರೆ ಅವುಗಳಷ್ಟು ಕರುಣೆಯುಳ್ಳ ಜೀವ ಮತ್ತೊಂದಿಲ್ಲ. ‘ನಾವು ಮನೆಯಿಂದ ಹೊರ ಹೋದರೆ ವಾಪಸ್ ಬರುವವರೆಗೆ ಮನೆಯಲ್ಲಿ ಯಾರು ಕಾಯುತ್ತಿರುತ್ತಾರೋ ಗೊತ್ತಿಲ್ಲ. ಆದರೆ ಪ್ರೀತಿಯಿಂದ ಸಾಕಿದ ನಾಯಿ ವಾಪಸ್ ಬರೊವರೆಗೂ ಕಾಯುತ್ತಲೇ ಇರುತ್ತದೆ. ನಾವು ಮರಣ ಹೊಂದಿ ಬಾರದ ಲೋಕಕ್ಕೆ ಹೋಗಿದ್ದರೂ ಈ ನಾಯಿ ಮಾತ್ರ ಕಾಯುತ್ತಲೇ ಇರುತ್ತದೆ. ಯಾಕಂದ್ರೆ ಅದಕ್ಕೆ ನಾವು ವಾಪಸ್ ಬರಲ್ಲಾಂತ ಗೊತ್ತಿರಲ್ಲ..!’ ಇಂತಹ ಘಟನೆಗಳಿಗೆ ಜಗತ್ತಿನಲ್ಲಿ ಸಾಕಷ್ಟು ಉದಾಹರಣೆಗಳೂ ಇವೆ.
ಭಾವುಕ ಜೀವಿ
ನಾಯಿ ಭಾವುಕ ಜೀವಿಯೂ ಹೌದು., ತನ್ನನ್ನು ಸಲಹುತ್ತಿರುವ ಮಾಲೀಕನಿಗೆ ನೋವಾದರೂ ಈ ಜೀವ ಮರುಗುತ್ತದೆ., ಸ್ವಲ್ಪ ಬೈದರೂ ಸಹಿಸಿಕೊಳ್ಳಲ್ಲ, ಮನದಲ್ಲೇ ಕೊರಗುತ್ತದೆ, ಹುಷಾರಿಲ್ಲದಾದರೆ ಕೊರಗುತ್ತದೆ. ಬೀದಿ ನಾಯಿಗಳೂ ಇದರಿಂದ ಹೊರತಾಗಿಲ್ಲ. ನಿತ್ಯ ಬರುವ, ಮಾತನಾಡಿಸುವವರು ಒಂದು ದಿವಸ ಕಂಡಿಲ್ಲವೆAದರೆ ಅವುಗಳೂ ಭಾವುಕರಾಗಿಬಿಡುತ್ತವೆ. ಮತ್ತೊಂದು ದಿನ ಕಂಡಾಗ ಅವುಗಳು ಪಡುವ ಸಂತಸ ಹೇಳತೀರದು., ಕುಣಿದು ಕುಪ್ಪಳಿಸುತ್ತವೆ.
ಎಚ್ಚರವಿರಬೇಕು
ಮೊದಲೇ ನಾಯಿಗಳು ಕ್ಯಾನಿಸ್ ಲುಪಸ್ ಫ್ಯಾಮಿಲಿಯ ತೋಳ ಜಾತಿಗೆ ಸೇರಿದವು. ಮೊನಚಾದ ಹಲ್ಲುಗಳು., ಬಲಿಷ್ಠ ಸ್ನಾಯುಗಳೊಂದಿಗೆ ಬೇಟೆ ಯಾಡುವ ಪ್ರಾಣಿ. ಎದುರಾಳಿಗಳನ್ನು ಕಂಡರೆ ಎಗರಿ ಬೀಳುವ ಜಾತಿ. ಹಾಗಾಗಿ ನಾಯಿಗಳ ಬಗ್ಗೆ ಸದಾ ಎಚ್ಚರವಿರಬೇಕು. ಸಾಮಾನ್ಯವಾಗಿ ಮನೆಯಲ್ಲಿ ಸಾಕಿದ ನಾಯಿಗಳು ತಮ್ಮ ಮನೆಯವರನ್ನು ಹೊರತು ಬೇರೆ ಯಾರೇ ಮನೆಗೆ ಬಂದರೂ ಸಹಿಸಲಾರವು. ಕಚ್ಚಿಬಿಡುತ್ತವೆ. ಹಾಗಾಗಿ ನಾಯಿ ಸಾಕಿದವರು ಈ ಬಗ್ಗೆ ಗಮನವಿರಿಸಬೇಕು. ಇನ್ನೂ ಬೀದಿ ನಾಯಿಗಳು ಎಂದರೆ ಎಲ್ಲರಿಗೂ ಒಂದು ರೀತಿಯ ತಾತ್ಸಾರವೇ., ನಾಯಿಗಳು ಅವುಗಳಾಗಿ ಬೀದಿಗೆ ಬರುವದಿಲ್ಲ, ಮನೆಯಲ್ಲಿ ಸಾಕಿದ ನಾಯಿ ಮರಿಗಳನ್ನು ಒಂದೋ ಅದು ಹೆಣ್ಣು ಮರಿ ಅಥವಾ ಅದಕ್ಕೆ ಹುಷಾರಿಲ್ಲದಿದ್ದರೆ ಅದನ್ನು ಸಾಕಿದವರೇ ಬೀದಿಗೆ ಬಿಡುತ್ತಾರೆ.
ಮನೆಯವರ ಪ್ರೀತಿ, ಅನುಕಂಪ ಕಳೆದುಕೊಳ್ಳುವ ಇಂತಹ ನಾಯಿಗಳು ಇತರರನ್ನು ಕಂಡಾಗ ದಾಳಿ ಮಾಡುತ್ತವೆ. ಕೆಲವೊಮ್ಮೆ ಆಹಾರ ಸಿಗದಿದ್ದಾಗ, ಸಂಭೋಗ ಪ್ರಕ್ರಿಯೆ ಯಲ್ಲಿರುವಾಗ ದಾಳಿ ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಎಚ್ಚರವಿರ ಬೇಕಾಗುತ್ತದೆ. ಕೆಲವೊಮ್ಮೆ ಅವುಗಳನ್ನು ಪ್ರೀತಿಯಿಂದ ಮಾತನಾಡಿಸಿದರೆ ಅಥವಾ ಗದರಿಸಿದರೆ ದೂರ ಹೋಗುತ್ತವೆ., ಹೆದರಿ ಓಡಿದರೆ ಅಟ್ಟಾಡಿಸುತ್ತವೆ. ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ಹಾಕಿಸುವದಲ್ಲದೆ, ನಾಯಿ ಕಚ್ಚಿದರೆ ನಾವೂ ಕೂಡ ಚುಚ್ಚುಮದ್ದು ಹಾಕಿಸಿಕೊಂಡು ನಮ್ಮ ಎಚ್ಚರದಲ್ಲಿ ನಾವಿರಬೇಕು.
ಕ್ರೀಡೆ-ಸ್ಪರ್ಧೆ
‘ಥೂ ನಾಯಿ..’ ಅಂತ ಆಗಾಗ್ಗೆ ಬಯ್ಯುವದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ನಾಯಿಗೂ ಸಮಾಜದಲ್ಲಿ ಗೌರವ, ಬೆಲೆಯೂ ಇದೆ. ಹೇಗೆ ಮನುಷ್ಯರಿಗೆ ಕ್ರೀಡಾಕೂಟ., ಮನರಂಜನಾ, ಸೌಂದರ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆಯೋ ಅದೇ ರೀತಿ ನಾಯಿಗಳಿಗೂ ಇವೆ.
ತರಬೇತಿ ಪಡೆದ ನಾಯಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ದಾಖಲೆ ಮಾಡಿದ್ದರೆ, ಇತ್ತ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ನಾಯಿಗಳು ಸುಂದರ ಯುವತಿಯರಿ ಗಿಂತ ನಾವೇನೂ ಕಮ್ಮಿ ಇಲ್ಲವೆಂಬAತೆ ಬಿನ್ನಾಣದ ನಡಿಗೆಯೊಂದಿಗೆ ಹೆಜ್ಜೆ ಹಾಕುತ್ತವೆ..! ಪತ್ತೆದಾರಿಕೆಯಲ್ಲಿ ಪೊಲೀಸ್ ಹಾಗೂ ಸೇನಾಪಡೆಗಳಿಗೆ ನೆರವಾಗಿ ಮೆಡಲ್ಗಳನ್ನೂ ಪಡೆದು ಕೊಂಡಿರುವ ಉದಾಹರಣೆಗಳೂ ಇವೆ.
‘ಇಗಿಇಖಙ ಆಔಉ ಊಂS ಂ ಆಂಙ.,’ ಎಂಬ ಮಾತಿನಂತೆ ಇಂದು ನಾಯಿಗಳ ದಿನ., ನಾಯಿ ಗಳೊಂದಿಗೆ ಪ್ರೀತಿಯಿಂದ ಕಾಲ ಕಳೆಯೋಣ.., ನಮ್ಮಂತೆ ಅವುಗಳೂ ಒಂದು ಜೀವವೆಂದು ಪ್ರೀತಿಸೋಣ..!
? ಕುಡೆಕಲ್ ಸಂತೋಷ್