ಮಡಿಕೇರಿ, ಆ. ೨೪: ಕಡಂಗಮರೂರು ಗ್ರಾಮದಲ್ಲಿ ಬೆಳ್ಳುಮಾಡು ಮೂಲಕ ಪಾರಾಣೆಗೆ ತೆರಳುವ ರಸ್ತೆಯಲ್ಲಿರುವ ಉಪರಸ್ತೆಯೊಂದಕ್ಕೆ ಮಳೆಯಿಂದಾಗಿ ಹಾನಿಯಾಗಿದೆ.
ಕೋದಂಡ, ಕರವಟ್ಟಿರ, ಮಾತಂಡ, ಪಂದ್ಯAಡ ಕುಟುಂಬಸ್ಥರ ಮನೆಗಳಿಗೆ ತೆರಳುವ ರಸ್ತೆ ಇದಾಗಿದ್ದು, ಈ ರಸ್ತೆ ಸಂಪೂರ್ಣವಾಗಿ ಕುಸಿದರೆ ಈ ಭಾಗದ ನಿವಾಸಿಗಳಿಗೆ ಪರ್ಯಾಯ ಮಾರ್ಗ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಈ ರಸ್ತೆಗೆ ತಡೆಗೋಡೆ ನಿರ್ಮಿಸಲು ಸಂಬAಧಿಸಿದ ಇಲಾಖೆ ಕ್ರಮಕೈಗೊಳ್ಳಬೇಕೆಂದು ಮಾತಂಡ ಮಧು ಪೂವಯ್ಯ ಹಾಗೂ ಈ ರಸ್ತೆಯನ್ನು ಬಳಸುತ್ತಿರುವ ಕುಟುಂಬಸ್ಥರು ಆಗ್ರಹಿಸಿದ್ದಾರೆ.