ಐಗೂರು, ಆ. ೨೪: ಮಾದಾಪುರದ ಸಿದ್ಧಿ ಬುದ್ಧಿ ಗಣಪತಿ ದೇವಾಲಯದಲ್ಲಿ ೪೫ನೇ ಗೌರಿ ಗಣೇಶ ಉತ್ಸವದ ಪ್ರಯುಕ್ತ ತಾ.೬ ಮತ್ತು ತಾ.೭ ರಂದು ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು. ತಾ. ೨೧ ರಂದು ಸಂಜೆ ೪ ಗಂಟೆಗೆ ಉತ್ಸವದ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ಸಮಿತಿ ತಿಳಿಸಿದೆ. ಕುಂಬೂರಿನ ಶ್ರೀ ಗೌರಿ ಗಣೇಶ ಸೇವಾ ಸಮಿತಿ ಆಶ್ರಯದಲ್ಲಿ ೬ನೇ ವರ್ಷದ ಗೌರಿ ಗಣೇಶ ಉತ್ಸವದ ಪ್ರಯುಕ್ತ ತಾ.೬ ಮತ್ತು ತಾ.೭ ರಂದು ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ತಾ.೧೬ ರಂದು ಮೂರ್ತಿಯನ್ನು ವಿಸರ್ಜಿಸಲಾಗುವುದು.
ಕಿರಗಂದೂರಿನ ದುರ್ಗಾ ನಗರದ ವಿನಾಯಕ ಸೇವಾ ಸಮಿತಿ ಹಾಗೂ ಕರಿಮಾರಿಯಮ್ಮ ಸಮಿತಿಯ ಆಶ್ರಯದಲ್ಲಿ ೩ನೇ ವರ್ಷದ ಗೌರಿ ಗಣೇಶ ಉತ್ಸವದ ಪ್ರಯುಕ್ತ ತಾ. ೭ರಂದು ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ತಾ.೧೩ ರಂದು ಉತ್ಸವದ ಮೂರ್ತಿಯನ್ನು ವಿಸರ್ಜಿಸಲಾಗುವುದು.