ವೀರಾಜಪೇಟೆ, ಆ. ೨೪: ಅರಸುನಗರ ನಿವಾಸಿ, ಗಾಯಕ ನೋಬಿನ್ ಕೆವಿನ್ (೬೧) ತಾ. ೨೪ರಂದು ಹೃದಯಾಘಾತದಿಂದ ನಿಧನರಾದರು. ಇವರು ಹಳೆಯ ಹಿಂದಿ, ಮಲಯಾಳಂ ಮತ್ತು ತಮಿಳು ಚಿತ್ರಗೀತೆಗಳನ್ನು ಕೊಡವ ಭಾಷೆಗೆ ಅನುವಾದ ಮಾಡಿ ಸಂಗೀತ ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಇವರ ಹಾಡುಗಳ ಅನೇಕ ಕ್ಯಾಸೆಟ್ಗಳು ಬಿಡುಗಡೆಗೊಂಡಿದ್ದವು. ಮಡಿಕೇರಿಯ ಹೊಟೇಲ್ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಇಂದು ಬೆಳಗ್ಗಿನ ಜಾವ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊಟೇಲ್ ಮಾಲೀಕರು ತಕ್ಷಣ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ನೋಬಿನ್ ಕೆವಿನ್ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.