ಕೂಡಿಗೆ, ಆ. ೨೪: ಕೊಡಗು ವಿಶ್ವವಿದ್ಯಾಲಯ ನೂತನ ಕುಲ ಸಚಿವರಾಗಿ (ಮೌಲ್ಯಮಾಪನ) ಪ್ರೊಫೆಸರ್ ಎಂ ಸುರೇಶ್ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿ, ಉತ್ತಮ ವಾತಾವರಣದಲ್ಲಿ ಕೊಡಗು ವಿಶ್ವವಿದ್ಯಾಲಯ ನಿರ್ಮಾಣವಾಗಿದ್ದು ಈ ವಿಶ್ವವಿದ್ಯಾಲಯವನ್ನು ರಾಜ್ಯಕ್ಕೆ ಮಾದರಿ ವಿಶ್ವವಿದ್ಯಾಲಯ ಮಾಡುವ ಕಲ್ಪನೆ ನಮ್ಮ ನಿಮ್ಮೆಲ್ಲರ ಮೇಲಿದೆ, ಕೊಡಗು ವಿಶ್ವವಿದ್ಯಾಲಯವನ್ನು ಇನ್ನಷ್ಟು ಬಲಿಷ್ಠ ಮತ್ತು ಉತ್ತಮ ಶಿಕ್ಷಣ ಕೊಡುವ ಸಂಕಲ್ಪ ಮಾಡುತ್ತೇನೆ. ಅದಕ್ಕೆ ಎಲ್ಲಾ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಸಹಕಾರ ನೀಡಿ ಕನಸು ನನಸ್ಸು ಮಾಡಬೇಕು ಎಂದರು.

ನAತರ ಮಾತನಾಡಿದ ನಿರ್ಗಮಿತ ಕುಲ ಸಚಿವರಾದ ಡಾ. ಸೀನಪ್ಪ ಕೊಡಗು ಜನರ ಆಶೋತ್ತರ ಹಾಗೂ ಕನಸನ್ನು ಸಕಾರಗೊಳಿಸಲು ಸಾಕಷ್ಟು ಪ್ರಯತ್ನಪಡುವ ಕೆಲಸ ಮಾಡಿದ್ದೇವೆ. ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳ ಸಹಕಾರದಿಂದ ವಿಶ್ವವಿದ್ಯಾಲಯವನ್ನು ಉನ್ನತಮಟ್ಟಕ್ಕೆ ತಲುಪಿಸುವ ಕೆಲಸ ನಿರ್ವಹಿಸಲಾಗಿದೆ ಎಂದರು.

ಇದೇ ಸಂದರ್ಭ ನಿರ್ಗಮಿತ ಕುಲಸಚಿವ ರಾದ ಡಾ. ಸೀನಪ್ಪ ಅವರು ನೂತನ ಕುಲ ಸಚಿವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭ ಎಫ್.ಎಂ.ಕೆ. ಎಂ.ಸಿ. ಪ್ರಾಂಶುಪಾಲರಾದ ಡಾ. ರಾಘವನ್, ಸಹಾಯಕ ಪ್ರಾಧ್ಯಾಪಕ ರಾದ ರವಿಶಂಕರ್ ಎಂ.ಎನ್, ಡಾ. ತಿಪ್ಪೇಸ್ವಾಮಿ, ಡಾ ನಾಗರಾಜ್, ಕೆ.ಟಿ, ಡಾ. ಎಂ.ಪಿ. ಕೃಷ್ಣ, ಡಾ. ಅರುಣ್ ಕುಮಾರ, ಗೀತಾಂಜಲಿ ಅರ್ಪಿತಾ, ಗಗನ್, ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು.