ವೀರಾಜಪೇಟೆ, ಆ. ೨೩: ನಾಟ್ಯ ಮಯೂರಿ ನೃತ್ಯ ಶಾಲೆ ಹಾಗೂ ಡಿವೈನ್ ಟೆಂಪಲ್ ಫೌಂಡೇಶನ್ ಬೆಂಗಳೂರು ಇದರ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಭರತನಾಟ್ಯ ಹಾಗೂ ನೃತ್ಯ ಕಲಾವಿದೆ ಶಿವಾನಿ ಸಿ.ಎನ್. ಅವರಿಗೆ ನೃತ್ಯ ಸಾಧನೆಗಾಗಿ ರಾಷ್ಟçಮಟ್ಟದ ಮಿನುಗುತಾರೆ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶಿವಾನಿ ಸಿ.ಎನ್. ವೀರಾಜಪೇಟೆಯ ಸೆಂಟ್ ಆನ್ಸ್ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಹಾಗೂ ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ. ಮೂಲತಃ ವೀರಾಜಪೇಟೆ ಸಮೀಪದ ಕೊಟ್ಟೋಳಿ ಗ್ರಾಮದ ಚಂಗಚAಡ ನಿಲೇಶ್ ನಂಜಪ್ಪ ಹಾಗೂ ರೇವತಿ ದಂಪತಿಯ ಪುತ್ರಿ ಆಗಿರುತ್ತಾಳೆ.