ಮಡಿಕೇರಿ, ಆ. ೨೩: ಹೊರ ಜಿಲ್ಲೆ, ಹೊರ ರಾಜ್ಯ, ಹೊರ ದೇಶಗಳ ಕಾರ್ಮಿಕರಿಂದ ಅಪರಾಧ ಪ್ರಕರಣಗಳು, ಅಹಿತಕರ ಘಟನೆಗಳು ಸಂಭವಿಸುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಕಾರ್ಮಿಕರ ಬಗ್ಗೆ ಸೂಕ್ತ ದಾಖಲಾತಿಗಳು ಇಲ್ಲದಿದ್ದಲ್ಲಿ ಕಾರ್ಮಿಕರಿಗೆ ನೆಲೆ, ಅವಕಾಶ ನೀಡುವ ತೋಟದ ಮಾಲೀಕರು, ಸಂಸ್ಥೆಗಳವರ ಮೇಲೆಯೂ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆವರು; ಹೊರ ಜಿಲ್ಲೆ, ರಾಜ್ಯ, ದೇಶಗಳಿಂದ ಕಾರ್ಮಿಕರಾಗಿರುವವರ ಬಗ್ಗೆ ಸಂಪೂರ್ಣ ದಾಖಲೆಗಳೊಂದಿಗೆ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಬೇಕು. ಕಡಿಮೆ ಸಂಬಳಕ್ಕೆ ಜನ ಸಿಗುತ್ತಾರೆಂದು ಯಾರನ್ನೂ ಸೇರಿಸಿಕೊಳ್ಳಬಾರದು. ಮುಂದಕ್ಕೆ ಸಮಸ್ಯೆ ಎದುರಾದಾಗ ಅಂತಹವರನ್ನು ಪತ್ತೆ ಹಚ್ಚುವುದು ಕಷ್ಟವಾಗಲಿದೆ. ಹಾಗಾಗಿ ಪ್ರತಿಯೊಬ್ಬರ ಸಂಪೂರ್ಣ ಮಾಹಿತಿ, ಅವರ ಚಿತ್ರ, ಗುರುತಿನ ಚೀಟಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕೆAದು ಸಲಹೆ ಮಾಡಿದರು. ಒಂದು ವೇಳೆ ಅಪರಾಧ ಪ್ರಕರಣದಲ್ಲಿ ಯಾರಾದರೂ ಹೊರಗಿನ ವ್ಯಕ್ತಿಗಳು ಪತ್ತೆಯಾದಲ್ಲಿ ಅವರುಗಳಿಗೆ ಆಶ್ರಯ ನೀಡಿರುವ ಮಾಲೀಕರುಗಳಲ್ಲಿ ಮಾಹಿತಿ ಇಲ್ಲದಿದ್ದಲ್ಲಿ ಮಾಲೀಕರುಗಳನ್ನು ಸೇರಿಸಿ ಮೊಕದ್ದಮೆ ದಾಖಲು ಮಾಡಲಾಗುವುದೆಂದು ಹೇಳಿದರು.
ಯಾರೇ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಕೂಡಲೇ ಪೊಲೀಸರನ್ನು ಸಂಪರ್ಕಿಸುವAತೆ ಅವರು ಮನವಿ ಮಾಡಿಕೊಂಡಿದ್ದಾರೆ.