ಕೂಡಿಗೆ, ಆ. ೨೩: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು ೨೦೨೩-೨೪ ನೇ ಸಾಲಿನಲ್ಲಿ ರೈತರಿಗೆ ಕೃಷಿ ಸಾಲ ನೀಡುವ ಮೂಲಕ, ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಂಘದ ಮುಖೇನ ವ್ಯವಹಾರ ನಡೆಸಿ ಈ ಸಾಲಿನಲ್ಲಿ ಸಂಘವು ರೂ. ೭೫.೬೦ ಲಕ್ಷ ಲಾಭಾಂಶವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಸಂಘದ ವ್ಯಾಪ್ತಿಯಲ್ಲಿ ೧೮ ಗ್ರಾಮಗಳಿದ್ದು, ಅದರಲ್ಲಿ ಎಲ್ಲಾ ಗ್ರಾಮಗಳು ಒಳಗೊಂಡAತೆ ೨೦೨೩-೨೪ ಸಾಲಿನಲ್ಲಿ ೪೨೨೮ ಮಂದಿ ಸದಸ್ಯತ್ವವನ್ನು ಹೊಂದಿದ್ದಾರೆ.

ಸAಘವು ಸದಸ್ಯರ ಪಾಲು ಬಂಡವಾಳವಾಗಿ ೩೬.೦೮ ಕೋಟಿ ಹಣವನ್ನು ಹೊಂದಿರುತ್ತದೆ. ಇದರಲ್ಲಿ ರೂ. ೨೨.೫೭ ಕೋಟಿ ಠೇವಣಿ ಸಂಗ್ರಹವಾಗಿರುತ್ತದೆ. ಸಂಘದಲ್ಲಿ ದುಡಿಯುವ ಬಂಡವಾಳವು ರೂ. ೪೨.೮೪ ಕೋಟಿ ಇರುತ್ತದೆ. ಕೃಷಿ ಮತ್ತು ಕೃಷಿಯೇತರ ಮತ್ತು ಇತರೆ ವ್ಯಾಪಾರ ವಹಿವಾಟುಗಳಿಂದ ಒಟ್ಟಾಗಿ ಸಂಘವು ಈ ಸಾಲಿನಲ್ಲಿ ರೂ. ೭೫.೬೦ ಲಕ್ಷ ಲಾಭಾಂಶ ಗಳಿಸಿದೆ.

ಸಂಘವು ಕಳೆದ ಸಾಲಿನಂತೆಯೇ ಈ ಸಾಲಿನಲ್ಲಿಯು ಆಡಿಟ್ ಗ್ರೇಡ್‌ನಲ್ಲಿ ‘ಎ’ ಗ್ರೇಡ್ ಪಡೆದಿದೆ. ಸಂಘವು ಮುಂದಿನ ದಿನಗಳಲ್ಲಿ ರೈತರ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳನ್ನು ಹಮ್ಮಿಕೊಂಡು ರೈತರ ದಾಖಲೆಯ ಅನುಗುಣವಾಗಿ ಅಭಿವೃದ್ಧಿಗೆ ಹೊಸ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅಧ್ಯಕ್ಷ ಕೆ.ಕೆ. ಹೇಮಂತ ಕುಮಾರ್ ತಿಳಿಸಿದರು.