ನಾಪೋಕ್ಲು, ಆ. ೨೩: ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಾಪೋಕ್ಲು ಕ್ಲಸ್ಟರ್ನ ಎಲ್ಲಾ ಶಾಲೆಗಳಿಗೆ ಸಮಗ್ರತೆಗಾಗಿ ಓಟ ಎಂಬ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮತ್ತು ಶಾಲೆಯ ಅಧ್ಯಕ್ಷ ರಾಜ ಚರ್ಮಣ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿದರು. ನಂತರ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ರತ್ನ ಚರ್ಮಣ, ವಿವಿಧ ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರು ಹಾಜರಿದ್ದರು. ಮ್ಯಾರಥಾನ್ ಸ್ಪರ್ಧೆಯಲ್ಲಿ ಅಂಕುರ್ ಪಬ್ಲಿಕ್ ಶಾಲೆ, ಶ್ರೀರಾಮ ಟ್ರಸ್ಟ್, ಸೇಕ್ರೆಡ್ ಹಾರ್ಟ್, ಕರ್ನಾಟಕ ಪಬ್ಲಿಕ್ ಶಾಲೆ, ಮರ್ಕಜ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಬಾಲಕರ ವಿಭಾಗದಲ್ಲಿ ಶ್ರೀ ರಾಮ ಟ್ರಸ್ಟ್ನ ಕಿರಿಟ್ ಸೋಮಯ್ಯ ಪ್ರಥಮ, ದ್ವಿತೀಯ ಅಂಕುರ್ ಪಬ್ಲಿಕ್ ಶಾಲೆಯ ಧೀಮಂತ ಎ.ಎಸ್, ಸೇಕ್ರೆಡ್ ಹಾರ್ಟ್ ಶಾಲೆಯ ಜೀವನ್ ಪಿ.ಜಿ. ತೃತೀಯ ಬಹುಮಾನವನ್ನು ಪಡೆದರು.
ಬಾಲಕಿಯರ ವಿಭಾಗದಲ್ಲಿ ಅಂಕುರ್ ಪಬ್ಲಿಕ್ ಶಾಲೆಯ ಫಾತಿಮತ್ ಮುಫೀದ ಪಿ.ಎ. ಪ್ರಥಮ, ರಾಮಟ್ರಸ್ಟ್ನ ಕೃಪ ಡಿ.ಪಿ. ದ್ವಿತೀಯ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಸಫ್ವಾನ ತೃತೀಯ ಬಹುಮಾನ ಪಡೆದುಕೊಂಡರು.