ಚೆಯ್ಯಂಡಾಣೆ, ಆ. ೨೩: ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಸಮಿತಿಯ ಅಧೀನದಲ್ಲಿ ಕೊಡಗು ಜಿಲ್ಲಾ ಮಟ್ಟದ ಕ್ಯಾಂಪಸ್ ವಿಂಗ್ ಸದಸ್ಯತ್ವ ಅಭಿಯಾನಕ್ಕೆ ಕಡಂಗದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾಧ್ಯಕ್ಷ ಶುಹೈಬ್ ಫೈಝಿ ಉದ್ಘಾಟಿಸಿ ಎಂಟನೇ ತರಗತಿ ವಿದ್ಯಾರ್ಥಿಗಳಿಂದ ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ, ಸರ್ಟಿಫಿಕೇಟ್ ಕೋರ್ಸ್, ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮತ್ತು ವಿದೇಶಗಳಲ್ಲಿ ಹಾಗೂ ಹೊರ ರಾಜ್ಯದಲ್ಲೂ ವ್ಯಾಸಂಗ ಮಾಡುವ ಜಿಲ್ಲೆಯ ವಿದ್ಯಾರ್ಥಿಗಳು ಸದಸ್ಯತ್ವ ಅಭಿಯಾನದಲ್ಲಿ ನೋಂದಣಿ ಮಾಡಬಹುದು ಎಂದರು.

ಎಲ್ಲಾ ಶಾಖೆಗಳಲ್ಲೂ ಕ್ಯಾಂಪಸ್ ವಿಂಗ್ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕಡಂಗ ಎಂ.ಜೆ.ಎA, ಅಧ್ಯಕ್ಷ ಅಬ್ದುಲ್ಲ ಪಿ.ಎಂ. ಮೊಯ್ಯದ್ದೀನ್ ಮಸೀದಿಯ ಖತೀಬ್ ರಫೀಕ್ ಲತೀಫಿ, ಎಸ್.ವೈ.ಎಸ್. ಆಮಿಲಾ ಜಿಲ್ಲಾಧ್ಯಕ್ಷ ಹ್ಯಾರಿಸ್ ಬೆಳ್ಳುಮಾಡು, ಮಸೀದಿ ಆಡಳಿತ ಸಮಿತಿ ಸದಸ್ಯರಾದ ರಝಾಕ್, ಶಮೀರ್, ಕ್ಯಾಂಪಸ್ ವಿಂಗ್ ಜಿಲ್ಲಾ ಸಮಿತಿ ಸದಸ್ಯ ರಾಫಿ, ಎಡಪಾಲ ಶಾಖೆಯ ಕ್ಯಾಂಪಸ್ ವಿಂಗ್ ಸದಸ್ಯ ಅಸ್ಲಂ, ಸಫ್ವಾನ್, ಝಇನ್ ಹಾಗೂ ವಿದ್ಯಾರ್ಥಿಗಳು ಮತಿತ್ತರರು ಉಪಸ್ಥಿತರಿದ್ದರು.

ಕಡಂಗ ಎಸ್.ಕೆ.ಎಸ್. ಎಸ್.ಎಫ್. ಅಧ್ಯಕ್ಷ ಇಸಾಕ್ ಸ್ವಾಗತಿಸಿ, ಕ್ಯಾಂಪಸ್ ವಿಂಗ್ ಕೊಡಗು ಜಿಲ್ಲಾ ಸಂಚಾಲಕ ಜಲೀಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.