ಸೋಮವಾರಪೇಟೆ, ಆ. ೨೨: ಪಟ್ಟಣ ಸಮೀಪದ ಮಸಗೋಡು ಗ್ರಾಮಕ್ಕೆ ಪ್ರವೇಶಿಸುವ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಗತ ಕಮಾನನ್ನು ಗ್ರಾಮದ ಪ್ರಮುಖರು ಉದ್ಘಾಟಿಸಿದರು. ಮಸಗೋಡು ಗ್ರಾಮದ ಲೋಕೇಶ್ ಮತ್ತು ಪುಟ್ಟರಾಜು ಅವರುಗಳು ತಮ್ಮ ತಾಯಿ ಗಂಗಮ್ಮ ಅವರ ಹೆಸರಿನಲ್ಲಿ ಗ್ರಾಮದ ಪ್ರವೇಶ ಸ್ಥಳದಲ್ಲಿ ನಿರ್ಮಿಸಿರುವ ಸ್ವಾಗತ ಕಮಾನನ್ನು ಮಸಗೋಡು ಲೋಕೇಶ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ತಮ್ಮ ತಾಯಿಯ ಸ್ಮರಣಾರ್ಥ ಸ್ವಾಗತ ಕಮಾನನ್ನು ನಿರ್ಮಿಸುವ ಸಂಬAಧ ಗ್ರಾಮಾಭಿವೃದ್ಧಿ ಸಮಿತಿಯೊಂದಿಗೆ ಚರ್ಚಿಸಿ, ಅವರ ಅನುಮತಿಯೊಂದಿಗೆ ನಿರ್ಮಿಸಲಾಗಿದೆ ಎಂದರು. ಈ ಸಂದರ್ಭ ಗ್ರಾಮ ಸಮಿತಿ ಅಧ್ಯಕ್ಷ ಪ್ರಸಿದ್ಧ್, ಗ್ರಾ.ಪಂ. ಮಾಜಿ ಸದಸ್ಯ ಭುವನ್, ವೀರಪ್ಪ ಮಾಸ್ಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.