ಕೂಡಿಗೆ, ಆ. ೨೨: ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊAಡಿರುವ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೂತನ ಆಯುಕ್ತ ಆರ್. ಚೇತನ್ ಭೇಟಿ ನೀಡಿ ಕ್ರೀಡಾ ಶಾಲೆಯ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಆಯುಕ್ತರು ಕ್ರೀಡಾ ಶಾಲೆಯ ಬಾಲಕಿಯರ ಮತ್ತು ಬಾಲಕರ ವಸತಿ ಗೃಹಗಳಿಗೆ ಭೇಟಿ ನೀಡಿ ಕುಶಲೋಪಹರಿ ವಿಚಾರಿಸಿ, ನಂತರ ಊಟದ ಹಾಲ್, ಹಾಕಿ ಟರ್ಫ್ ಮೈದಾನ ಹಾಗೂ ೪೦೦ ಮೀಟರ್ನ ಟ್ರಾö್ಯಕ್ ವ್ಷೀಕಣೆ ಮಾಡಿದ ಅವರು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವ ಬಗ್ಗೆ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕಿ ವಿ.ಟಿ. ವಿಸ್ಮಯಿ ಕ್ರೀಡಾ ಶಾಲೆಯ ವಿವಿಧ ವಿಭಾಗದ ಕ್ರೀಡಾ ತರಬೇತುದಾರರಾದ ವೆಂಕಟೇಶ್, ಸುರೇಶ್, ದೀನಮಣಿ, ಹಾಸ್ಟೆಲ್ ಮೇಲ್ವಿಚಾರಕಿ ಕವಿತಾ, ಸಿಬ್ಬಂದಿ ವರ್ಗದವರು ಹಾಜರಿದ್ದರು.