ಮಡಿಕೇರಿ, ಆ. ೨೨: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಸಮೀಪಿಸುತ್ತಿದ್ದು, ದಸರಾ ಮಂಟಪಗಳಲ್ಲಿ ಡಿಜೆ ಅಳವಡಿಕೆ, ಮಂಟಪಗಳು ಸಾಗುವ ರಸ್ತೆಗಳ ದುರಸ್ತಿ, ಮಂಟಪಗಳಿಗೆ ಹೆಚ್ಚಿನ ಅನುದಾನದ ಕುರಿತು ಇಂದು ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆದ ದಶಮಂಪಟ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು.

ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಂಟಪ ಸಮಿತಿಗಳ ಪ್ರಮುಖರು, ವಿಜಯದಶಮಿಯಂದು ಮಂಟಪಗಳಲ್ಲಿ ಡಿಜೆ ಅಳವಡಿಕೆ ಮಾಡಲು ಅವಕಾಶವಿಲ್ಲ ಎಂದು ಸಂಬAಧಿಸಿದ ಇಲಾಖೆಗಳು ತಿಳಿಸಿದ್ದು, ಈ ಬಗ್ಗೆ ಸಂಬAಧಿಸಿದವರೊAದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಡಿಜೆ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಮಂಟಪಗಳು ಸಾಗುವ ರಸ್ತೆಗಳು ಹಾಳಾಗಿದ್ದು, ಆದಷ್ಟು ಶೀಘ್ರವಾಗಿ ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು ಹಾಗೂ ದಸರಾ ಉತ್ಸವಕ್ಕೆ ಬಿಡುಗಡೆಯಾಗುವ ಅನುದಾನದಲ್ಲಿ ಹೆಚ್ಚಿನ ಪಾಲನ್ನು ಮಂಟಪ ಹಾಗೂ ಕರಗ ಸಮಿತಿಗಳಿಗೆ ಉತ್ಸವಕ್ಕೂ ಮುನ್ನವೇ ನೀಡಬೇಕೆಂದು ಆಗ್ರಹಿಸಿದರು. ಕರಗ ಸಮಿತಿ ಪ್ರಮುಖರು ಮಾತನಾಡಿ, ಕರಗ ಸಮಿತಿಗಳಿಗೆ ಜಿಎಸ್‌ಟಿ ನಿಯಮದಿಂದ ತೊಂದರೆಯಾಗುತ್ತಿದ್ದು, ಇದನ್ನು ಸರಿಮಾಡಬೇಕೆಂದು ಕೋರಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿ ದಸರಾ ಉತ್ಸವಕ್ಕೆ ಸಂಬAಧಿಸಿದAತೆ ರೂ. ೩ ಕೋಟಿ ಬಜೆಟ್ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ಡಿಜೆ ಬಳಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದೆಂದರು.

ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ ಮಾತನಾಡಿ, ಡಿಜೆ ಬಳಕೆ ಸಂಬAಧ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಚರ್ಚಿಸೋಣ ಎಂದು ಹೇಳಿದರು. ದಸರಾ ಸಮಿತಿ ಉಪಾಧ್ಯಕ್ಷ ಬಿ.ಎಂ. ರಾಜೇಶ್ ಮಾತನಾಡಿ, ದಸರಾ ಉತ್ಸವ ಅಚ್ಚುಕಟ್ಟಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕೆಂದು ಹೇಳಿದರು.

ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ಮಾತನಾಡಿ, ಡಿಜೆ ವಿಚಾರಕ್ಕೆ ಸಂಬAಧಿಸಿದAತೆ ಮುಂದಿನ ದಿನಗಳಲ್ಲಿ ಸಂಬAಧಿಸಿದವರೊAದಿಗೆ ಚರ್ಚಿಸಲಾಗುವುದು. ರಸ್ತೆ ದುರಸ್ತಿ, ಬೀದಿದೀಪಗಳ ದುರಸ್ತಿ, ಪಂಪಿನ ಕೆರೆ ಸ್ವಚ್ಛತೆಗೆ ಸಂಬAಧಿಸಿದAತೆ ಸಂಬAಧಪಟ್ಟ ಇಲಾಖೆಗಳಿಗೆ ಸಮಿತಿಯಿಂದ ಪತ್ರ ಬರೆದು ಕ್ರಮಕೈಗೊಳ್ಳಲಾಗುವುದು. ಎಲ್ಲಾ ಮಂಟಪ ಸಮಿತಿಗಳ ಸಹಕಾರ ಪಡೆದು ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.

ದಶಮಂಟಪ ಸಮಿತಿ ಗೌರವಾಧ್ಯಕ್ಷರುಗಳಾದ ಮಂಜುನಾಥ್, ಸುಕುಮಾರ್, ಕಾರ್ಯಾಧ್ಯಕ್ಷ ಬಿ.ಕೆ. ಜಗದೀಶ್, ಕರಗ ಸಮಿತಿ ಪ್ರಮುಖರಾದ ಉಮೇಶ್ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ದಶಮಂಟಪ ಸಮಿತಿ ಖಜಾಂಚಿ ಸದಾ ಮುದ್ದಪ್ಪ, ಉಪಾಧ್ಯಕ್ಷ ಪ್ರಭುರೈ, ಬಿ.ಪಿ. ಡಿಶು, ಕೋಟೆ ಮಾರಿಯಮ್ಮ ಮಂಟಪ ಸಮಿತಿ ಅಧ್ಯಕ್ಷ ಕೂಪದಿರ ಅಯ್ಯಪ್ಪ, ಕರಗ ಸಮಿತಿಯ ಪ್ರಮುಖರಾದ ಮಧುರಯ್ಯ, ಚಾಮಿ ಉಪಸ್ಥಿತರಿದ್ದರು. ಮಂಜುನಾಥ್, ಮುದ್ದುರಾಜ್ ಕಾರ್ಯಕ್ರಮ ನಿರ್ವಹಿಸಿದರು.