xಸೋಮವಾರಪೇಟೆ, ಆ. ೨೧: ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದ ವಿವಾಹಿತೆ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾನಗಲ್ಲು ಗ್ರಾಮದ ನವೀನ್ಕುಮಾರ್ ಅವರ ಪತ್ನಿ ಮಮತ (೩೫) ಎಂಬವರೇ ಕಾಣೆಯಾದವರು. ತಾ. ೧೭ರಂದು ಪತಿ ಕೆಲಸಕ್ಕೆ ತೆರಳಿದ ಸಂದರ್ಭ ಮಮತ ಮನೆಯಿಂದ ಹೊರಹೋಗಿದ್ದು, ಈವರೆಗೆ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪತ್ನಿಯ ಬಗ್ಗೆ ಅಕ್ಕಪಕ್ಕದವರಲ್ಲಿ ವಿಚಾರಿಸಿದ ಮೇರೆ ತನ್ನ ಸಹೋದರಿಯ ಪತಿ ಚೇತನ್ ಎಂಬಾತನೊAದಿಗೆ ಬೈಕ್ನಲ್ಲಿ ಮಮತ ತೆರಳಿದ್ದಾಳೆ ಎಂದು ತಿಳಿದುಬಂದಿದ್ದು, ಚೇತನ್ನ ಮೊಬೈಲ್ ಸಹ ಸ್ವಿಚ್ಆಫ್ ಆಗಿದೆ. ನೆಂಟರಿಷ್ಟರ ಮನೆಯಲ್ಲಿ ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಪತಿ ನವೀನ್ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ ೯೯೦೧೭೮೧೬೬೫ ಸಂಖ್ಯೆಯನ್ನು ಸಂಪರ್ಕಿಸಬೇಕೆAದು ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಾದೇವ ಮನವಿ ಮಾಡಿದ್ದಾರೆ.