ಶ್ರೀಮAಗಲ, ಆ. ೨೧: ಅಂತರಾಷ್ಟಿçÃಯ ಕಾಫಿ ಮಾರುಕಟ್ಟೆ ದರ ಏರಿಕೆಯಾಗಿದ್ದರೂ ಸಹ ಸ್ಥಳೀಯ ವ್ಯಾಪಾರಿಗಳು ಅದಕ್ಕೆ ಅನುಗುಣವಾಗಿ ಕಾಫಿ ಖರೀದಿಸದೆ ಕಡಿಮೆ ದರಕ್ಕೆ ಖರೀದಿಸುವ ಮೂಲಕ ಬೆಳೆಗಾರರನ್ನು ವಂಚಿಸುತ್ತಿದ್ದಾರೆ ಎಂದು ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಈ ಬಗ್ಗೆ ಸಮಾಲೋಚನಾ ಸಭೆ ನಡೆಸಿದ ಪ್ರಮುಖರು ಈ ಬಗ್ಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೂಲಕ ಕೇಂದ್ರ ವಾಣಿಜ್ಯ ಸಚಿವರ ಗಮನ ಸೆಳೆದು ನ್ಯಾಯ ಒದಗಿಸಲು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.

ಅಂತರಾಷ್ಟಿçÃಯ ಕಾಫಿ ಖರೀದಿಸುವ ಸಂಸ್ಥೆಗಳು ತಮ್ಮದೇ ಆದ ಖರೀದಿ ವ್ಯವಸ್ಥೆಯನ್ನು ಮಾಡಿ ಸ್ಥಳೀಯ ಬೆಳೆಗಾರರಿಂದ ನೇರವಾಗಿ ಕಾಫಿ ಖರೀದಿಸುವ ಮೂಲಕ ಬೆಳೆಗಾರರಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯ ದರ ಸಿಗುವಂತೆ ಬೆಳೆಗಾರರ ಹಿತ ಕಾಪಾಡಬೇಕು. ಮಧ್ಯವರ್ತಿಗಳಿಂದ ಕಾಫಿ ಖರೀದಿಸುವುದನ್ನು ಅಂತಾ ರಾಷ್ಟಿçÃಯ ಸಂಸ್ಥೆಗಳು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ತಾ. ೨೧ಕ್ಕೆ ೪,೬೦೦ ಡಾಲರ್ ದರವಿದ್ದು ಇದರ ಅನುಗುಣವಾಗಿ ಕಾಫಿ ಬೇಳೆ ದರ ಅಂದರೆ ಇಪಿ ೪೩೯ ಇರಬೇಕು. ಆದರೆ ಸ್ಥಳೀಯ ಮಧ್ಯವರ್ತಿಗಳು ೩೯೫- ೪೦೦ ಇಪಿ.ಗೆ ಖರೀದಿಸುತ್ತಿದ್ದಾರೆ. ಏಪ್ರಿಲ್ ಅಂತ್ಯದಲ್ಲಿ ೪೧೫೦ ಡಾಲರ್ ದರ ಇದ್ದರೂ ಇ ಪಿ ದರ ೩೯೫-೪೦೦ಕ್ಕೆ ಖರೀದಿಸ ಲಾಗುತ್ತಿತ್ತು. ಆದರೆ ಈಗ ಅಂತಾರಾಷ್ಟಿçÃಯ ಕಾಫಿ ದರ ೪,೬೦೦ ಬಂದಿದ್ದರೂ ಸಹ ಇದೇ ಇಪಿ ಪ್ರಮಾಣದಲ್ಲಿ ಖರೀದಿಸಲಾಗುತ್ತಿದೆ. ಎಂದು ಸಂರಕ್ಷಣಾ ವೇದಿಕೆ ಪ್ರಮು ಖರು ಅಸಮಾಧಾನ ವ್ಯಕ್ತಪಡಿಸಿದರು.

ಕಾಫಿ ಮಂಡಳಿಯ ವಿಸ್ತರಣಾ ಘಟಕ ಅಂತರಾಷ್ಟ್ರೀಯ ಮಾರುಕಟ್ಟೆ ಅನುಗುಣ ಸ್ಥಳೀಯ ದರವನ್ನು ಪ್ರಕಟಿಸಬೇಕು. ಇವುಗಳನ್ನು ಸ್ಥಳೀಯ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವಂತೆ ಪ್ರಮುಖರು ಸಲಹೆ ನೀಡಿದರು.

ಕಾಫಿ ಮಂಡಳಿಗೆ ಬೆಳೆಗಾರರ ಪರ ಆಯ್ಕೆಯಾಗಿರುವ ಸದಸ್ಯರು ಇಂದು ಮೌನವಾಗಿರುವುದನ್ನು ಪ್ರಶ್ನಿಸಿದ ಪ್ರಮುಖರು ಬೆಳೆಗಾರರಿಗೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವಂತೆ ಒತ್ತಾಯಿಸಿದರು.

ಸಮಾಲೋಚನಾ ಸಭೆಯಲ್ಲಿ ಕೊಡಗು ಕೊಡಗು ಸಂರಕ್ಷಣಾ ವೇದಿಕೆಯ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಪ್ರಮುಖರಾದ ನಿವೃತ್ತ ಕರ್ನಲ್ ಚೆಪ್ಪುಡೀರ ಮುತ್ತಣ್ಣ, ಮಲ್ಲಮಾಡ ಪ್ರಭು ಪೂಣಚ್ಚ, ಅಣ್ಣೀರ ಹರೀಶ್ ಮಾದಪ್ಪ, ಉಳುವಂಗಡ ಲೋಹಿತ್ ಭೀಮಯ್ಯ, ಮಲಚೀರ ಶಾನ್ ಬೋಪಯ್ಯ, ತೀತಮಾಡ ಪೂವಣ್ಣ ಹಾಜರಿದ್ದರು.