ಮಡಿಕೇರಿ, ಆ. ೨೦: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಡಿಕೇರಿ ಶಾಖೆ ವತಿಯಿಂದ ಸೋಮವಾರ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಬ್ರಹ್ಮ ಕುಮಾರಿ ಗಾಯತ್ರಿ ಅವರು ಕಾಮ, ಕ್ರೋಧ, ಲೋಭ ಮೋಹ, ಮದ, ಮಾತ್ರ್ಯಗಳನ್ನು ತೊಡೆದು ಹಾಕಿ ಪರಮಾತ್ಮನ ರಕ್ಷಣೆ ಕೋರುವುದು ರಕ್ಷಾ ಬಂಧನದ ಸಂಕೇತ ಎಂದರು.
ಧ್ಯಾನದ ಮೂಲಕ ನಮ್ಮ ಭ್ರುಕುಟಿ ಮಧ್ಯದಲ್ಲ್ಲಿರುವ ಆತ್ಮನ ದರ್ಶನ- ಅನುಭವ ಪಡೆಯಲು ಈ ವಿದ್ಯಾಲಯಕ್ಕೆ ಬಂದು ಅಭ್ಯಸಿಸುವಂತೆ ಕರೆಯಿತ್ತರು. ಬ್ರಹ್ಮಕುಮಾರಿ ಧನಲಕ್ಷಿö್ಮ ಅವರು ಮಾತನಾಡಿ, ರಕ್ಷಾಬಂಧನ ವಿಶ್ವ ಭ್ರಾತೃತ್ವದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು. ಮಡಿಕೇರಿ ತಾಲೂಕು ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅತಿಥಿಗಳಾಗಿ ಮಾತನಾಡಿದರು.
ಆಗಮಿಸಿದ ನಾಗರಿಕರಿಗೆ ಗಾಯತ್ರಿ ಅವರು ರಕ್ಷಾಬಂಧನ ಕಟ್ಟಿದರು. ಪ್ರಸಾದ ವಿನಿಯೋಗ ನಡೆಯಿತು.