ಸೋಮವಾರಪೇಟೆ, ಆ. ೨೦: ಸಮೀಪದ ಕಲ್ಕಂದೂರು ಗ್ರಾಮದ ನಿವಾಸಿ, ನಿವೃತ್ತ ಕೆಎಸ್ಆರ್ಟಿಸಿ ಅಧಿಕಾರಿ ನಾರಾಯಣ ಪೂಜಾರಿ ಎಂಬವರು ಮಂಗಳವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಾನುವಾರದಂದು ಪುತ್ರಿಯೊಂದಿಗೆ ಮಂಗಳೂರಿಗೆ ತೆರಳಿದ್ದ ನಾರಾಯಣ ಪೂಜಾರಿಯವರು, ಸೋಮವಾರ ರಾತ್ರಿ ಸೋಮವಾರಪೇಟೆಗೆ ಹಿಂತಿರುಗಿದ್ದಾರೆ. ಮಂಗಳವಾರದAದು ಬೆಳಿಗ್ಗೆ ೧೦.೩೦ರ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಸ್ನಾನಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಬುಧವಾರದಂದು ಬೆಳಗ್ಗೆ ಕಲ್ಕಂದೂರು ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ನಡೆಸಲಾಗುವುದು. ಮೃತರು ಪತ್ನಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರು ಕರ್ನಾಟಕ ರಕ್ಷಣಾ ವೇದಿಕೆ, ಜನಶಕ್ತಿ ವೇದಿಕೆ ಸೇರಿದಂತೆ ಹಲವಾರು ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.