ಸುಂಟಿಕೊಪ್ಪ, ಆ. ೧೯: ಸುಂಟಿಕೊಪ್ಪದ ೧ನೇ ವಿಭಾಗದ ಶಿವರಾಮ್ ರೈ ಬಡಾವಣೆಯ ಎಮ್ಮೆಗುಂಡಿ ರಸ್ತೆಯಲ್ಲಿ ತಾ. ೧೮ರಂದು ರಾತ್ರಿ ೧೧ ಗಂಟೆಗೆ ಒಂಟಿ ಸಲಗ ಜನವಸತಿ ಪ್ರದೇಶದಲ್ಲಿ ಸಂಚರಿಸಿ ಆತಂಕ ಸೃಷ್ಟಿಸಿದೆ. ಕಾಡಾನೆಯನ್ನು ಕಂಡು ರಾತ್ರಿ ಮನೆಗೆ ತೆರಳುವವರು ಆನೆಯನ್ನು ಕಂಡು ದಿಕ್ಕು ಪಾಲಾಗಿ ಓಡಿದ್ದಾರೆ. ಆನೆಯು ಎಮ್ಮೆಗುಂಡಿ ರಸ್ತೆಯಿಂದ ನೇರವಾಗಿ ವಿಜಯ ಪ್ಲಾಂಟೇಶನ್ ಕಟ್ಟಡ ಸಮೀಪದ ಅಯ್ಯಪ್ಪ ದೇವಾಲಯದವರೆಗೆ ಬಂದು ರಾಷ್ಟಿçÃಯ ಹೆದ್ದಾರಿಯಲ್ಲಿ ಸಾಗಿ ನಂತರ ಶಾಂತಿಗೇರಿ ತೋಟಕ್ಕೆ ನುಗ್ಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಳೆದ ಹಲವು ದಿನಗಳಿಂದ ಒಂಟಿ ಸಲಗ ಹಲವು ವಾಹನ ಸವಾರರಿಗೆ ಕಾಣಸಿಗುತ್ತಿದ್ದು, ಭೀತಿ ಹುಟ್ಟಿಸಿದೆ. -ರಾಜು ರೈ.