ಗುಡ್ಡೆಹೊಸೂರು, ಆ. ೧೯: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ಆನೆ ದಾಳಿಗೆ ಯತ್ನಿಸಿದ ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರಾದ ಘಟನೆ ವಾಲ್ನೂರು ಬಳಿ ನಡೆದಿದೆ.

ಮುಂಜಾನೆ ಕೆಲಸದ ನಿಮಿತ್ತ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಎರಡು ಮರಿಗಳ ಜೊತೆಯಲ್ಲಿದ್ದ ನಾಲ್ಕು ಆನೆಗಳು ವಾಲ್ನೂರು ನಿವಾಸಿ ವಸಂತ ಅವರ ಮೇಲೆ ದಾಳಿ ಮಾಡಿದೆ. ವಸಂತ್ ಅವರು ಕೂದಲೆಳೆಯ ಅಂತರದಿAದ ಪಾರಾಗಿದ್ದಾರೆ. ವಸಂತ್ ಅವರ ಸ್ಕೂಟರ್ ಜಖಂಗೊAಡಿದೆ. ವಸಂತ್ ಅವರು ತಮ್ಮ ವಾಹನ ಬಿಟ್ಟು ಓಡಿಲ್ಲದಿದ್ದಲ್ಲಿ ಪ್ರಾಣಾಪಾಯ ಸಂಭವಿಸುತ್ತಿತ್ತು ಎಂದು ವಸಂತ್ ವಿವರಿಸಿದರು. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಸುಭ್ರಾಯ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.