ಮಡಿಕೇರಿ, ಆ. ೧೯: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಸಮಾಜ ಬಾಂಧವರಿಗೆ ಉಪಾಕರ್ಮ ಕಾರ್ಯಕ್ರಮ ನಿಧಿಯ ಶತಮಾನ ಭವನದಲ್ಲಿ ನಡೆಯಿತು. ಪುರೋಹಿತರುಗಳಾದ ವಿಠಲ್ ಭಟ್ ಮತ್ತು ಸಂತೋಷ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಹಾಜರಿದ್ದರು.