ಮಡಿಕೇರಿ, ಆ. ೧೯: ಅನಾರೋಗ್ಯದಿಂದ ಯುವಕ ಸಾವನ್ನಪ್ಪಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿ ಕಾವೇರಿ ಲೇಔಟ್ ನಿವಾಸಿ, ಮಡಿಕೇರಿ ಸಂಚಾರಿ ಪೊಲೀಸ್ ಸಿಬ್ಬಂದಿ ಉದಯಕುಮಾರ್ ಹಾಗೂ ಶಿಕ್ಷಕಿ ಮಂದಾಕಿಣಿ ದಂಪತಿಯ ಪುತ್ರ ಪುನೀತ್ (೨೩) ಮೃತ ಯುವಕ. ರಕ್ತ ಸಂಬAಧಿ ಕಾಯಿಲೆಯಿಂದ ಬಳಲುತ್ತಿದ್ದ ಪುನೀತ್ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ. ಅಂತ್ಯಕ್ರಿಯೆ ಮಡಿಕೇರಿ ಬ್ರಾಹ್ಮಣರ ರುದ್ರಭೂಮಿಯಲ್ಲಿ ನೆರವೇರಿತು.