ಚೆಯ್ಯಂಡಾಣೆ, ಆ. ೧೮: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ವಾರ್ಷಿಕ ಮಹಾ ಸಭೆ ಚೇನಂಡ ಗಿರೀಶ್ ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ಸಾಲಿನ ವರದಿಯನ್ನು ಶಿಕ್ಷಕಿ ಹೇಮಮಾಲಿನಿ, ಶೈಕ್ಷಣಿಕ ವರದಿಯನ್ನು ಮುಖ್ಯ ಶಿಕ್ಷಕಿ ಭವ್ಯ ಮಂಡಿಸಿದರು.
ಸದಸ್ಯರಾದ ಮೇದುರ ಗಣು ಕುಶಾಲಪ್ಪ, ಚೇನಂಡ ಜೆಪ್ಪು ದೇವಯ್ಯ, ಬೋವ್ವೇರಿಯಂಡ ದಿಲೀಪ್, ಮೋಹನ್ ಮೊಣ್ಣಪ್ಪ, ಅರುಣ್,ಮತ್ತಿತರು ಮಾತನಾಡಿ ಶಾಲಾ ಆಡಳಿತ ಮಂಡಳಿ ಶಾಲೆಯ ಅಭಿವೃದ್ಧಿ ಬಗ್ಗೆ ಚಿಂತಿಸಿ,ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸಿ, ಶಿಕ್ಷಕ ವೃಂದದವರ ಪರಿಶ್ರಮದಿಂದ ೨ ವರ್ಷ ೧೦೦ ಶೇಖಡ ಫಲಿತಾಂಶ ಬಂದಿದೆ. ಈ ವರ್ಷ ಕೂಡ ೧೦೦ ಶೇಖಡ ಫಲಿತಾಂಶಕ್ಕೆ ಪೈಪೋಟಿ ನಡೆಸಿ ಹ್ಯಾಟ್ರಿಕ್ ಸಾಧನೆ ಮಾಡಿ ಶಾಲೆಯನ್ನು ಉಳಿಸಿ ಬೆಳೆಸುವಂತ ಕೆಲಸ ವಾಗಲಿ ಎಂದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಜೇಶ್ ಅಚ್ಚಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಈ ವರ್ಷ ವಲಯ ಮಟ್ಟದ ಕ್ರೀಡಾಕೂಟ ಇದೆ ಶಾಲೆಯಲ್ಲಿ ನಡೆಯುತ್ತಿದೆ ಅದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆಗಳನ್ನು ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರು ಪುಟ್ಟ ಪೆಮ್ಮಯ್ಯ, ಪ್ರಕಾಶ್ ಕಾರ್ಯಪ್ಪ, ಅಶೋಕ್, ರೊಯ್, ಜಿಮ್ಮಿ ಚಂಗಪ್ಪ, ಮಾಲಿನಿ, ಶಿಕ್ಷಕರು, ಸದಸ್ಯರು ಉಪಸ್ಥಿತರಿದ್ದರು. ಮೊದಲಿಗೆ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಗಿರೀಶ್ ಪೂಣಚ್ಚ ಸ್ವಾಗತಿಸಿ, ರಾಜೇಶ್ ಅಚ್ಚಯ್ಯ ವಂದಿಸಿದರು.