ಸೋಮವಾರಪೇಟೆ, ಆ. ೧೮: ಪಟ್ಟಣದ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ತಿಂಗಳಿAದ ಭಗವತಿ ದೇವಿಗೆ ನಡೆಯುತ್ತಿದ್ದ ಕರ್ಕಾಟಕ ಮಾಸದ ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನಗೊAಡಿತು.
ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ನೇತೃತ್ವದಲ್ಲಿ ಕಳೆದ ಜುಲೈ ೧೬ ರಂದು ಆರಂಭಗೊAಡ ದೀಪ ನಮಸ್ಕಾರ ಪೂಜೆಯ ಜೊತೆ, ಆ. ೪ ರಂದು ವಿಶೇಷ ಶತ್ರು ಸಂಹಾರ ಪೂಜೆ, ಆ. ೯ ರಂದು ನಾಗರಪಂಚಮಿ, ಆ. ೧೦ ರಂದು ಅಯ್ಯಪ್ಪ ಸ್ವಾಮಿಗೆ ನಿರಂಜನಾ ಸೇವೆ, ೧೫ ರಂದು ಭುವನೇಶ್ವರಿ ಸನ್ನಿಧಿಯಲ್ಲಿ ಮಹಾಲಕ್ಷಿö್ಮ ಹೋಮ ನಡೆಯುವುದರೊಂದಿಗೆ ಸಂಪನ್ನಗೊAಡಿತು.
ಕರ್ಕಾಟಕ ಮಾಸದ ಪೂಜೆಯಲ್ಲಿ ಭುವನೇಶ್ವರಿ ದೇವಿಗೆ ವಾಲ್ ಕನ್ನಾಡಿ, ವರ್ಷಕ್ಕೊಮ್ಮೆ ಶತ್ರು ಸಂಹಾರ ಪೂಜೆ ಸಲ್ಲಿಸುವ ಕರ್ಕಾಟಕ ಅಮಾವಾಸ್ಯೆಯಂದು ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲು ಮುಖವಾಡ ಮತ್ತು ಕೊನೆಯ ದಿನ ದೇವಿಗೆ ಚತುರ್ ಬಾಹು ಒಳಗೊಂಡ ಅಲಂಕಾರ ಮಾಡುವ ಮುಖವಾಡಗಳನ್ನು ಅರ್ಚಕ ಮಣಿಕಂಠನ್ ನಂಬೂದರಿ ಅವರ ಸಹಕಾರದಲ್ಲಿ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಭಕ್ತರು ದೇವಿಗೆ ಸಮರ್ಪಿಸಿದರು. ಪೂಜಾ ಕಾರ್ಯಗಳನ್ನು ಅರ್ಚಕರಾದ ಜಗದೀಶ್ ಉಡುಪ ನೆÀರವೇರಿಸಿಕೊಟ್ಟರು. ಅರ್ಚಕರಾದ ವೆಂಕಟೇಶ್ ಹೊಳ್ಳ, ಪ್ರಸಾದ್ ಭಟ್, ಚಂದ್ರಹಾಸ ಭಟ್, ಶ್ರೀರಂಗ, ವೆಂಕಟೇಶ್ ಅಯ್ಯರ್, ಸಹಾಯಕ ಬಜೆ ಗುಂಡಿ ಮಣಿ ಮತ್ತಿತರರು ಸಹಕರಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಒಂದು ತಿಂಗಳು ದೇವಿಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಿತ್ಯ ಭಜನೆಯನ್ನು ಮಹಿಳಾ ಭಕ್ತರು ಮತ್ತು ಅರ್ಚಕರಾದ ವೆಂಕಟೇಶ್ ಹೊಳ್ಳ ನಡೆಸಿದರು.