ವೀರಾಜಪೇಟೆ, ಆ. ೧೭: ರಾಷ್ಟಿçÃಯ ಹಬ್ಬಗಳ ಆಡಳಿತ ಸಮಿತಿ ಹಾಗೂ ತಾಲೂಕು ಆಡಳಿತ ವೀರಾಜ ಪೇಟೆ ಇವರುಗಳ ಸಂಯುಕ್ತ ಆಶ್ರಯ ದಲ್ಲಿ ನಡೆದ ಸ್ವಾತಂತ್ರö್ಯ ದಿನಾಚರಣೆ ಯಲ್ಲಿ ತಾಲೂಕು ಆಡಳಿತ, ಮಾಜಿ ಸೈನಿಕರನ್ನು ಅವಮಾನಿಸಿರುವುದನ್ನು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಆಗಸ್ಟ್ ೧೫ ರಂದು ನಡೆದ ಕಾರ್ಯಕ್ರಮ ತಾಲೂಕು ಆಡಳಿತದ ವೇದಿಕೆ ಆಗಿರದೆ ಕೇವಲ ಪುರಸಭಾ ಸದಸ್ಯರ ವೇದಿಕೆ ಯಾಗಿತ್ತು ಎಂದು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಆರೋಪಿಸಿದ್ದಾರೆ.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾv Àನಾಡಿದ ಅವರು, ರಾಷ್ಟಿçÃಯ ಹಬ್ಬಗ ಳಾದ ಸ್ವಾತಂತ್ರೊö್ಯÃತ್ಸವ ಗಣರಾಜ್ಯೋ ತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ತಾಲೂಕು ಮೈದಾ ನದಲ್ಲಿ ಕಳೆದ ಹಲವು ದಶಕಗಳಿಂದ ನಡೆಸಲಾಗುತ್ತಿದೆ. ಇಂತಹ ಕಾರ್ಯ ಕ್ರಮದಲ್ಲಿ ಸಾಧಕರನ್ನು, ದೇಶಸೇವೆ ಮಾಡಿದವ ರನ್ನು ಗಣ್ಯರನ್ನು ಸನ್ಮಾನಿ ಸುವ ಪರಿಪಾಠ ಹಿಂದಿನಿAದಲು ನಡೆದುಕೊಂಡು ಬಂದಿದೆ.
ಪ್ರತಿವರ್ಷ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಸೇನೆಯಲ್ಲಿ ಸಾಧನೆ ಮಾಡಿದ, ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಯೋಧರನ್ನು ಸನ್ಮಾನಿಸಲಾಗುತ್ತದೆ. ಈ ಬಾರಿಯು ಕೂಡ ದೇಶ ಸೇವೆಯಲ್ಲಿ ಸಾಧನೆ ಮಾಡಿದ ಮಾಜಿ ಯೋಧರುಗಳಾದ ನಾಯಕಂಡ ಬೋಪಣ್ಣ, ಪುಗ್ಗೆರ ಪೊನ್ನಪ್ಪ, ಐನಂಡ ಮಂದಣ್ಣ, ಕಟ್ಟೆರ ವಿಶ್ವನಾಥ್, ಮುಂಡ್ಯೋಳAಡ ಬೋಪಯ್ಯ ಅವರುಗಳನ್ನು ಸನ್ಮಾನಿಸಲಾಯಿತು. ಆದರೆ ಸನ್ಮಾನಿತರಿಗೆ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಿರಲಿಲ್ಲ. ಶಿಷ್ಠಾಚಾರದ ಪ್ರಕಾರ ಪ್ರಥಮ ಸಾಲಿನಲ್ಲಿ ಶಾಸಕರು, ದಂಡಾಧಿಕಾರಿ ಗಳು, ಅತಿಥಿಗಳು ಅಧಿಕಾರಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಎರಡನೆ ಸಾಲನ್ನು ೨೨ ಪುರಸಭೆ ಸದಸ್ಯರಿಗೆ ಮೀಸಲಿಡಲಾಗಿತ್ತು. ಮೂರನೇ ಸಾಲಿನಲ್ಲಿ ಕಂದಾಯ ಇಲಾಖಾ ಸಿಬ್ಬಂದಿಗಳು, ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡವರಿಗೆ ಇತ್ಯಾದಿಗಳಿಗೆ ಮೀಸಲಿಡಲಾಗಿತ್ತು.
ಹಲವಾರು ವರ್ಷಗಳ ಕಾಲ ತಮ್ಮ ಜೀವಮಾನವನ್ನು ಸೇನೆಯಲ್ಲಿ ಕಳೆದು ಅವರ ಸಂದ್ಯಾಕಾಲದಲ್ಲಿ ಅವರ ಸೇವೆಯನ್ನು ಗುರುತಿಸಿ ಸಂಘದ ಮೂಲಕ ರಾಷ್ಟಿçÃಯ ಹಬ್ಬಗಳ ವೇದಿಕೆಯಲ್ಲಿ ಅವರನ್ನು ಸನ್ಮಾನ ಮಾಡುವಾಗ ಅವರಿಗೆ ಅಗೌರವ ತೋರಿರುವುದು ತಾಲೂಕು ಆಡಳಿತಕ್ಕೆ ಶೋಭೆ ತರುವಂತದಲ್ಲ. ನಮಗೆ ಆದಂತಹ ಅವಮಾನಕ್ಕೆ ನಾವುಗಳು ಸಭೆಯನ್ನು ಬಹಿಷ್ಕರಿಸಿ ತೆರಳಲು ಸಿದ್ದತೆ ನಡೆಸಲಾಗಿತ್ತು. ದೇಶಸೇವೆ ಮಾಡಿದ ನಾವು ವೇದಿಕೆಯಲ್ಲಿದ್ದ ಶಾಸಕರುಗಳಿಗೆ ಅವಮಾನ ಮಾಡಬಾರದು ಎಂಬ ಏಕೈಕ ಉದ್ದೇಶದಿಂದ ನಮಗಾದ ಅವಮಾನವನ್ನು ಸಹಿಸಿಕೊಂಡು ಹಿಂತಿರುಗಬೇಕಾಯಿತು. ಮುಂದಿನ ಬಾರಿಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾ ಬೇಡವ ಎಂಬ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜ ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ ಉಪಸ್ಥಿತರಿದ್ದರು.