ಕರಿಕೆ, ಆ. ೧೮: ಇಲ್ಲಿಗೆ ಸಮೀಪದ ಚೆಂಬೇರಿ ತೋಟಂ ಎಂಬಲ್ಲಿ ಕೋಳಿಗೂಡಿಗೆ ದಾಳಿ ಮಾಡಿದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆಹಿಡಿದು ರಕ್ಷಿಸುವಲ್ಲಿ ಕರಿಕೆ ಉಪವಲಯ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತೋಟಂ ನಿವಾಸಿ ಆಷಾಮ್ ಎಂಬವರ ಕೋಳಿಗೂಡಿಗೆ ಬೆಳಗ್ಗಿನ ಜಾವ ನುಗ್ಗಿದ ಹೆಬ್ಬಾವು ನಾಲ್ಕು ಕೋಳಿಗಳನ್ನು ನುಂಗಿಹಾಕಿದೆ. ಸುಮಾರು ಹದಿನೈದು ಕೆ.ಜಿ. ತೂಕ, ಆರು ಅಡಿ ಉದ್ದದ ಹಾವನ್ನು ಅರಣ್ಯ ಸಿಬ್ಬಂದಿ ಚಂದ್ರಶೇಖರ ಸೆರೆಹಿಡಿದು ಗ್ರಾಮಸ್ಥರ ಆತಂಕ ದೂರಮಾಡಿದರು. ಉಪ ವಲಯ ಅರಣ್ಯ ಅಧಿಕಾರಿ ಸಚಿನ್ ಬಿರಾದಾರ ಹಾಗೂ ಪರಮೇಶ್ ನೇತೃತ್ವದಲ್ಲಿ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಯಿತು.