ನಾಪೋಕ್ಲು, ಆ. ೧೮: ಸಮೀಪದ ಮೂರ್ನಾಡು ಪದವಿಪೂರ್ವ ಶಾಲೆಯ ರಾಷ್ಟಿçÃಯ ಸೇವಾ ಯೋಜನೆ ಘಟಕದ ಸದಸ್ಯರು ಹಾಗೂ ಶಾಲೆಯ ಇಕೋ ಕ್ಲಬ್ ಸದಸ್ಯರು ಸಮೀಪದ ರೈತರ ಗದ್ದೆಗಳಿಗೆ ತೆರಳಿ ಸಸಿಮಡಿಗಳಿಂದ ಅಗೆ ತೆಗೆಯುವುದು, ಭತ್ತದ ನಾಟಿ ಮಾಡುವುದು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು.
ಈ ಸಂದರ್ಭ ಪ್ರೌಢಶಾಲೆ ಶಿಕ್ಷಕಿಯರಾದ ಕಸ್ತೂರಿ, ತೇಜಶ್ವಿನಿ, ಜಶ್ಮಿನಿ ಹಾಗೂ ವಿದ್ಯಾರ್ಥಿಗಳಿದ್ದರು.