ಗೋಣಿಕೊಪ್ಪ ವರದಿ, ಆ. ೧೭ : ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಗೋಣಿಕೊಪ್ಪ ಲಯನ್ಸ್ ಕ್ಲಬ್ ಆಯೋಜಿಸಿದ್ದ ಫ್ರೀಡಂ ರನ್ ಓಟದಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡರು. ಪೊನ್ನಂಪೇಟೆಯಿAದ ಗೋಣಿಕೊಪ್ಪದವರೆಗೆ ಓಟ ನಡೆಯಿತು. ಕಿರಿಯರು, ಹಿರಿಯರು ಪಾಲ್ಗೊಂಡು ಗಮನ ಸೆಳೆದರು. ೮೭ ವಯಸ್ಸಿನ ಹಿರಿಯರಾದ ಪೆಮ್ಮಂಡ ಪೊನ್ನಪ್ಪ ಗುರಿ ಪೂರ್ಣಗೊಳಿಸಿ ಗಮನ ಸೆಳೆದರು. ೮೨ ವಯಸ್ಸಿನ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ ಓಟದಲ್ಲಿ ಪಾಲ್ಗೊಂಡು ಸ್ಪೂರ್ತಿ ಯಾದರು. ಉಮಾಮಹೇಶ್ವರಿ ಪೆಟ್ರೋಲ್ ಬಂಕ್ ಆವರಣದಲ್ಲಿ ಬಹುಮಾನ ವಿತರಣೆ ನಡೆಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಸಿ. ಟಿ. ಅಪ್ಪಣ್ಣ, ಕಾರ್ಯದರ್ಶಿ ಪಟ್ರಂಗಡ ಶ್ರೀಮಂತ್ ಮುತ್ತಣ್ಣ, ಖಜಾಂಚಿ ಸಚಿನ್ ಬೆಳ್ಯಪ್ಪ, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಪಾರುವಂಗಡ ಬೋಸ್ ಪೆಮ್ಮಯ್ಯ, ಉದ್ಯಮಿ ಕೊಲ್ಲೀರ ಉಮೇಶ್ ಬಹುಮಾನ ವಿತರಿಸಿದರು.
ಫಲಿತಾಂಶ : ೬೦ ವಯಸ್ಸು ಮೇಲ್ಪಟ್ಟವರಲ್ಲಿ ಎನ್. ಯು. ಭೀಮಯ್ಯ (ಪ್ರ), ಎಂ. ಡಿ. ರಮೇಶ್ (ದ್ವಿ), ಎಂ. ಎಂ. ಉತ್ತಯ್ಯ (ತೃ), ೮೦ ವರ್ಷ ಮೇಲ್ಪಟ್ಟವರಲ್ಲಿ ಪೆಮ್ಮಯ್ಯ ಪ್ರಥಮ ಸ್ಥಾನ ಪಡೆದುಕೊಂಡರು. ಕಿರಿಯ ಪ್ರಾಥಮಿಕ ಬಾಲಕರಲ್ಲಿ ಚೇಂದೀರ ದೃವ್, ಎಂ. ಥರಣ್, ಜಿ.ಪಿ. ಜನಿತ್, ಬಾಲಕಿಯರಲ್ಲಿ ಎಸ್. ಎಸ್. ಭೂಮಿಕಾ, ವಿ. ಎ. ಆನಿಯಾ, ಕೆ.ಪಿ. ಮಿಥಾಲಿ, ಹಿರಿಯ ಪ್ರಾಥಮಿಕ ಬಾಲಕರಲ್ಲಿ ಧೈವಿಕ್ ಪೊನ್ನಣ್ಣ, ಶೃಹಾಲ್ ಸೋಮಣ್ಣ, ತಶನ್ ಸುಬ್ಬಯ್ಯ, ಬಾಲಕಿಯರಲ್ಲಿ ಪ್ರತಿಕ್ಷಾ ಪೂವಮ್ಮ, ಟೈನಾ ಕಾವೇರಮ್ಮ, ತಪಸ್ವಿ ತಂಗಮ್ಮ, ಪ್ರೌಢ ಬಾಲಕರಲ್ಲಿ ಆರ್ಯನ್ ಅಯ್ಯಪ್ಪ, ಕೆ. ಪಿ. ಪೂವಣ್ಣ, ಪ್ರಥಮ್ ಪೂವಯ್ಯ, ಬಾಲಕಿಯರಲ್ಲಿ ಎ. ಎಂ. ತಂಗಮ್ಮ, ಬಿ.ಯು. ಮನಸ್ವಿ, ಎಂ. ಯು. ವಿದ್ಯಾ, ಕಾಲೇಜು ಹಾಗೂ ಮುಕ್ತ ವಿಭಾಗದಲ್ಲಿ ಎಚ್. ಎಂ. ಮನೋಜ್, ಪಿ. ಕೆ. ಸುಬ್ರಮಣಿ, ಕೆ. ಎಂ. ಶಾಜಿ, ಮಹಿಳೆಯರಲ್ಲಿ ಕೆ.ಟಿ. ಚೋದಮ್ಮ, ರೋಶಿಕಾ, ದೇವಿಕಾ ನಂಜಪ್ಪ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಗಳಿಸಿದರು.