ಚೆಯ್ಯಂಡಾಣೆ, ಆ. ೧೭: ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫೀ ಶಹೀದ್ (ರ.ಅ), ಸಯ್ಯದ್ ಹಸನ್ ಸಖಾಫ್ (ರ.ಅ) ಹಾಗೂ ಇನ್ನಿತರ ಔಲಿಯಾಗಳ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವನ್ನು ೨೦೨೫ರ ಫೆ.೨೧ರಿಂದ ೨೮ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಶುಕ್ರವಾರ ಜುಮಾ ನಮಾಜಿನ ಬಳಿಕ ಸಂಪ್ರದಾಯದAತೆ ದಫ್ ಪ್ರದರ್ಶನದೊಂದಿಗೆ ಸೂಫಿ ಶಹೀದ್ ವಲಿಯುಲ್ಲಾಹಿ ಅವರ ದರ್ಗಾಕ್ಕೆ ತೆರಳಿದ ಸಯ್ಯದ್ ಅಝೀಝ್ ತಂಙಳ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ಸಂದರ್ಭ ಎಮ್ಮೆಮಾಡು ಜಮಾಅತ್ ಅಧ್ಯಕ್ಷರಾದ ಪಿ.ಎ. ಅಬೂಬಕ್ಕರ್ ಸಖಾಫಿ ಅವರು ಉರೂಸ್ ಸಮಾರಂಭದ ದಿನಾಂಕವನ್ನು ಘೋಷಣೆ ಮಾಡಿದರು.
ಈ ಸಂದರ್ಭ ಎಮ್ಮೆಮಾಡು ಜಮಾಅತ್ ಉಪಾಧ್ಯಕ್ಷರಾದ ಬಿ.ಉ.ಅಶ್ರಫ್, ಕಾರ್ಯದರ್ಶಿ ಸಿ. ಕೆ. ಹಾರಿಸ್, ಜಮಾಅತ್ ಮಾಜಿ ಅಧ್ಯಕ್ಷರಾದ ಉಸ್ಮಾನ್ ಹಾಜಿ, ಚಕ್ಕೇರ ಮೂಸಾ ಹಾಜಿ, ಬಿ.ಎಂ. ಉಮ್ಮರ್ ಹಾಜಿ, ಹಸೈನಾರ್ ಹಾಜಿ, ಮಸೀದಿಯ ಖತೀಬರಾದ ಅಬ್ದುಲ್ ರಾಝಿಕ್ ಫೈಝಿ, ಮುದರ್ರಿಸ್ ಹಂಝ ಸಖಾಫಿ, ಜಮಾಅತ್ ಆಡಳಿತ ಮಂಡಳಿ ಸದಸ್ಯರು, ಶಹೀದಿಯಾ ಅನಾಥಾಯದ ಪದಾಧಿಕಾರಿಗಳು, ರಿಫಾಹಿಯಾ ದಫ್ ಸಂಘದ ಸದಸ್ಯರು, ಜಮಾಅತ್ನ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.