ಸೋಮವಾರಪೇಟೆ,ಆ.೧೭: ಸಿ ಮತ್ತು ಡಿ ಕೃಷಿ ಜಮೀನು ಹೋರಾಟ ಸಮಿತಿ ವತಿಯಿಂದ ತಾ. ೧೯ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಸೋಮವಾರಪೇಟೆಯ ವರ್ತಕರ ಸಂಘ ಬೆಂಬಲ ನೀಡಿದೆ ಎಂದು ಸಂಘದ ಅಧ್ಯಕ್ಷ ಜಿ.ಕೆ. ಧನುರಾಜ್ ತಿಳಿಸಿದ್ದಾರೆ.

ಹೋರಾಟ ಸಮಿತಿಯ ಮನವಿ ಮೇರೆಗೆ ಅಂದು ಬೆಳಿಗ್ಗೆ ೧೧.೩೦ರಿಂದ ೧೨.೩೦ರವರೆಗೆ ಒಂದು ಗಂಟೆಗಳ ಕಾಲ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.