ಮಡಿಕೇರಿ, ಆ. ೧೭: ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿ ಟಿ.ಎಲ್. ಹರ್ಷಿತ್ ಪೊನ್ನಪ್ಪ ಅವರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಮಾಡುವ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿ (ಸಾಂಸ್ಕೃತಿಕ) ೨೦೨೩-೨೪ಗೆ ಆಯ್ಕೆಯಾಗಿದ್ದಾರೆ. ಪ್ರತಿಭಾ ಪ್ರಶಸ್ತಿ ಹಾಗೂ ರೂ. ೧೦,೦೦೦/- ನಗದು ಬಹುಮಾನ ಪಡೆದಿರುತ್ತಾರೆ. ಇವರು ಮಡಿಕೇರಿಯ ಸಂಗೀತ ಶಿಕ್ಷಕಿ ಸರೋಜ ಅವರ ಬಳಿ ಸೀನಿಯರ್ ವ್ಯಾಸಂಗ ಮಾಡುತ್ತಿದ್ದು, ದೇಚೂರು ನಿವಾಸಿ ತಾಪಂಡ ಲೋಕೇಶ್ ಮತ್ತು ಶುಭಾ ದಂಪತಿಯ ಪುತ್ರ.