ಮಡಿಕೇರಿ, ಆ. ೧೭: ಜಿಲ್ಲೆಯ ಗೋಮಾಳ ಜಾಗವನ್ನು ಷರತ್ತು ಮುಖಾಂತರ ಗೋ ಶಾಲೆ ನಡೆಸುವವರಿಗೆ ಗುತ್ತಿಗೆಗೆ ನೀಡುವ ಮೂಲಕ ವಯಸ್ಸಾದ ಮತ್ತು ಪಟ್ಟಣ ಪ್ರದೇಶಗಳ ಬೀದಿಗಳಲ್ಲಿರುವ ಗೋವುಗಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕೆAದು ಹ್ಯೂಮನ್ ರೈಟ್ಸ್ ಇಂಟರ್‌ನ್ಯಾಷನಲ್ ಫೆಡರೇಷನ್‌ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಬೀದಿ ಬದಿಯ ದನಗಳು ತೊಂದರೆ ಅನುಭವಿಸುತ್ತಿದ್ದು, ಮಡಿಕೇರಿಯ ಅಬ್ಬಿಫಾಲ್ಸ್ ರಸ್ತೆಯಲ್ಲಿ ಸರ್ಕಾರದ ಗೋಶಾಲೆ ಇದ್ದರೂ ಸಾರ್ವಜನಿಕರು, ರೈತರು ತಮಗೆ ಸಾಕಲು ಅಸಾಧ್ಯವಾದ ಗೋವುಗಳನ್ನು ಬಿಡಲು ಆಗುತ್ತಿಲ್ಲ. ಮಡಿಕೇರಿಯಲ್ಲಿ ೨೪ ಎಕರೆ ಗೋಮಾಳ ಜಾಗವಿದ್ದರೂ ಅದರಲ್ಲಿ ೮ ಎಕ್ರೆ ಜಾಗವನ್ನು ಗೋಶಾಲೆಗೆ ಬಳಸಿಕೊಳ್ಳಲಾಗಿದೆ. ಅಲ್ಲಿ ಗೋವುಗಳಿಗೆ ಶೆಡ್‌ಕಟ್ಟಿ ೩೭ ಗೋವುಗಳಿಗೆ ಆಶ್ರಯ ಕಲ್ಲಿಸಲಾಗಿದೆ. ಆದರೆ ಗೋಶಾಲೆಯ ಅಭಿವೃದ್ಧಿಗಾಗಿ ಹಣ ಬಂದಿದ್ದರೂ ಈ ೮ ಎಕ್ರೆ ಜಾಗಕ್ಕೆ ಗಿಡಮರಗಳಿಂದಲೇ ಬೇಲಿ ಹಾಕಬೇಕು ಎಂಬ ನಿಯಮವಿದೆ ಹೊರತು ತಂತಿ ಬೇಲಿ ಹಾಕಲು ಅನುಮತಿ ಇಲ್ಲದಾಗಿದೆ ಎಂದು ಟೀಕಿಸಿದರು.

ಕೊಡಗಿನಲ್ಲಿರುವ ಗೋಮಾಳ ಜಾಗಗಳನ್ನು ಷರತ್ತು ಮುಖಾಂತರ ಗೋ ಶಾಲೆ ನಡೆಸುವವರಿಗೆ ಭೋಗ್ಯಕ್ಕೆ ನೀಡಿದರೆ ಗೋವುಗಳನ್ನು ಸುರಕ್ಷಿತವಾಗಿರಸಬಹುದು ಎಂದು ಅಭಿಪ್ರಾಯಿಸಿದರು.

ಕೊಡಗಿನ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಕಾಟ ಮೀತಿಮೀರಿದ್ದು, ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲು ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಮಡಿಕೇರಿ ನಗರದಲ್ಲಿ ಮತ್ತು ಕೊಡಗಿನ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು, ಸಮರ್ಪಕವಾಗಿ ಚರಂಡಿ ವ್ಯವಸ್ಥೆಗಳಿಲ್ಲದೆ ಮಳೆಯ ನೀರು ರಸ್ತೆಯಲ್ಲಿ ನಿಂತು ರಸ್ತೆ ಗುಂಡಿಮಯವಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಸಂಬAಧಪಟ್ಟ ಅಧಿಕಾರಿಗಳು ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ಅಥವಾ ಚರಂಡಿಗಳ ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಫೆಡರೇಷನ್‌ನ ಜಿಲ್ಲಾಧ್ಯಕ್ಷ ಪಿ.ಎಸ್. ಭರತ್, ಕಾರ್ಯದರ್ಶಿ ಸೋಮನಾಥ್, ಸಲಹೆಗಾರ ಚೌರೀರ ರಮೇಶ್ ಕಾವೇರಪ್ಪ, ಸದಸ್ಯ ಅಮ್ಮಾಣಂಡ ಪೆಮ್ಮಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ ಹಾಜರಿದ್ದರು.