ಮಡಿಕೇರಿ, ಆ. ೧೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ “ಕೊಡವ ಕಥೆ ಜೊಪ್ಪೆ”ಯನ್ನು ಹೊರತರಲು ಸೂಕ್ತ ಕಥೆಗಳನ್ನು ಆಹ್ವಾನಿಸಿದೆ. ಸುಮಾರು ೨೫ ರಿಂದ ೩೦ರಷ್ಟು ಕತೆಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಕತೆಗಳನ್ನು ಎ ೪ ಅಳತೆಯ ಕಾಗದದಲ್ಲಿ ಸ್ಪುಟವಾಗಿ ಬರೆದಿದ್ದು ೫-೬ ಪುಟಗಳನ್ನು ಮೀರುವಂತಿಲ್ಲ. ಕಥಾವಸ್ತು ಲೇಖನ ಕಲ್ಪನೆಗೆ ಬಿಟ್ಟಿದ್ದು. ಕಥೆಗಳು ಪ್ರತ್ಯಕ್ಷ-ಪರೋಕ್ಷವಾಗಿ ಯಾರದ್ದು ತೇಜೋವಧೆಯಾಗಲಿ, ಜಾತಿ-ಧರ್ಮಗಳ ಭಾವನೆಗಳಿಗೆ ಘಾಸಿ ಉಂಟು ಮಾಡುವುದಾಗಿರಕೂಡದು. ಅಂತಿದ್ದಲ್ಲಿ ಅದರ ಸಾಧಕ-ಭಾದಕಗಳಿಗೆ ಕಥೆಗಾರರೇ ಜವಾಬ್ದಾರರಾಗುವುದು. ಕೊಡವ ಸಂಸ್ಕೃತಿ-ಪದ್ಧತಿ, ಮೂಲತನಕ್ಕೆ ಒತ್ತುಕೊಡುವಂತಿದ್ದು ಸಾರ್ವಕಾಲಿಕವಾಗಿರಲಿ. ಪ್ರಕಟಿತ ಕಥೆಗಳಿಗೆ ಅಕಾಡೆಮಿ ಗೊತ್ತುಪಡಿಸಿರುವಂತೆ ಸಂಭಾವನೆ ನೀಡುವುದು. ಕಥೆಗಾರರು ತಮ್ಮ ಸ್ವಪರಿಚಯವನ್ನು ೪-೫ ವಾಕ್ಯಗಳಿಗೆ ಮೀರದಂತೆ ಬರೆದು ಕೊಡುವುದು. ಪ್ರತಿಯೊಬ್ಬ ಕಥೆಗಾರರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಲಗತ್ತಿಸಬೇಕು. ಕಥೆಗಳನ್ನು ಕಳುಹಿಸಿಕೊಡಲು ಸೆ.೨೦ ಅಂತಿಮ ದಿನ. ಒಬ್ಬರು ಒಂದಕ್ಕಿAತ ಹೆಚ್ಚಿನ ಕಥೆಗಳನ್ನು ಕಳುಹಿಸುವಂತಿಲ್ಲ. ಕಥೆಗಳನ್ನು ಅಧ್ಯಕ್ಷರು / ರಿಜಿಸ್ಟಾçರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಭವನ, ಮ್ಯಾನ್ಸ್ ಕಾಂಪೌAಡ್, ಮಡಿಕೇರಿ. ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.