ಸೋಮವಾರಪೇಟೆ, ಆ. ೧೮: ನೂತನವಾಗಿ ರಚನೆಯಾಗಿರುವ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳ ನೀರು ನಿರ್ವಾಹಕರ ಸಂಘದ ಕಚೇರಿಯನ್ನು ಸಮೀಪದ ಬೇಳೂರು ಗ್ರಾ.ಪಂ. ವಾಪ್ತಿಯ ಬಜೆಗುಂಡಿ ಗ್ರಾಮದಲ್ಲಿರುವ ಕಟ್ಟಡದಲ್ಲಿ ಉದ್ಘಾಟಿಸಲಾಯಿತು.
ಬೇಳೂರು ಗ್ರಾಮ ಪಂಚಾಯಿತಿಯ ನೀರು ನಿರ್ವಾಹಕ ಹಾಗೂ ಸಂಘದ ಅಧ್ಯಕ್ಷ ಕೆ.ಎನ್. ಶಂಕರ್ ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ನೀರು ನಿರ್ವಾಹಕರ ಸಂಘವನ್ನು ಸ್ಥಾಪಿಸಲಾಗಿದೆ. ಸಂಘದ ಮೂಲಕ ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಆಸಿಫ್, ಕಾರ್ಯದರ್ಶಿ ಶಶಿ ತಿಮ್ಮಯ್ಯ, ಖಜಾಂಚಿ ಮೂರ್ತಿ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.