ಕುಶಾಲನಗರ, ಆ. ೧೮: ಕುಶಾಲನಗರ ಪಟ್ಟಣ ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಾ.೧೯ರಂದು (ಇಂದು) ಚುನಾವಣೆ ನಡೆಯಲಿದೆ.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾದರೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಪ್ರತಿನಿಧಿಗೆ ಮೀಸಲಾಗಿದೆ.
ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು ೧೬ ಮಂದಿ ಸದಸ್ಯರಿದ್ದು, ಇದರಲ್ಲಿ ಕಾಂಗ್ರೆಸ್ ಆರು, ಬಿಜೆಪಿ ಆರು ಸದಸ್ಯರೊಂದಿಗೆ ನಾಲ್ಕು ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಈ ಹಿಂದೆ ಜೆಡಿಎಸ್ನ ಮೂರು ಮಂದಿ ಸದಸ್ಯರ ಬೆಂಬಲದೊAದಿಗೆ ಬಿಜೆಪಿಯ ಜಯವರ್ಧನ್ ಅಧ್ಯಕ್ಷರಾಗಿ ಮತ್ತು ಜೆಡಿಎಸ್ ಪಕ್ಷದ ಸುರಯ್ಯ ಬಾನು ಉಪಾಧ್ಯಕ್ಷರಾಗಿ ಪ್ರಥಮ ಅವಧಿಯನ್ನು ಮುಗಿಸಿದ್ದರು.
ಈ ನಡುವೆ ಆಡಳಿತ ಅಧಿಕಾರಿಗಳ ಸುಪರ್ದಿಯಲ್ಲಿ ಪಂಚಾಯಿತಿ ಕೆಲಸ ನಿರ್ವಹಿಸುತ್ತಿದೆ.
ಬಿಜೆಪಿಯ ರೂಪ ಉಮಾಶಂಕರ್ ಮತ್ತು ಶೈಲಾ ಕೃಷ್ಣಪ್ಪ ಅವರುಗಳು ಸ್ಪರ್ಧೆಯಲ್ಲಿದ್ದು, ಪಕ್ಷ ರೂಪ ಉಮಾಶಂಕರ್ ಪರವಾಗಿ ನಿಲುವು ತಾಳಿರುವುದು ಬಿಜೆಪಿಯ ಒಂದು ಗುಂಪಿನಲ್ಲಿ ಅಸಮಾಧಾನ ತಂದಿದೆ.
ಇತ್ತ ಅಧ್ಯಕ್ಷಗಾದಿಗೆ ಕಾಂಗ್ರೆಸ್ನಿAದ ಜಯಲಕ್ಷಿö್ಮಚಂದ್ರ ಮತ್ತು ಜಯಲಕ್ಷö್ಮಮ್ಮ ನಂಜುAಡಸ್ವಾಮಿ ಅವರುಗಳು ಹಣಾಹಣಿಯಲ್ಲಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜಯವರ್ಧನ್ ಮತ್ತು ಕಾಂಗ್ರೆಸ್ ಪಕ್ಷದಿಂದ ಪುಟ್ಟಲಕ್ಷö್ಮಮ್ಮ ಅವರು ಆಕಾಂಕ್ಷಿಗಳಾಗಿದ್ದಾರೆ.
ಬಿಜೆಪಿಯ ಆಕಾಂಕ್ಷಿಗಳು ಒಮ್ಮತಕ್ಕೆ ಬರದಿರುವ ಕಾರಣ ಜೆಡಿಎಸ್ ಸದಸ್ಯರು ಬೆಂಬಲ ನೀಡುವಲ್ಲಿ ಗೊಂದಲ ಉಂಟಾಗಿ ಕಾಂಗ್ರೆಸ್ಸ್ ಪರ ಕೈ ಎತ್ತುವ ಸಾಧ್ಯತೆಯೂ ಅಲ್ಲಗೆಳೆಯುವಂತಿಲ್ಲ.
ಈ ಕಾರಣದಿಂದಾಗಿ ರಾಜ್ಯದಲ್ಲಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲಿ ಕೆಲಸ ಮಾಡುವುದು ಬಹುತೇಕ ಗೊಂದಲಮಯವಾಗಿ ಗೋಚರಿಸುತ್ತಿದೆ.
ಈ ಹಿಂದೆ ಇಲ್ಲಿನ ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿರುವ ಕಾರಣ ಈ ಬಾರಿಯ ಅಧ್ಯಕ್ಷ ಉಪಾಧ್ಯಕ್ಷ ಗಾದಿಗೆ ತಂತ್ರಗಾರಿಕೆ ಹೂಡಲು ಜೆಡಿಎಸ್ ಸದಸ್ಯರಿಗೆ ಮೈತ್ರಿ ನಿಯಮ ಪಾಲಿಸುವಂತೆ ಮಾಡುವಲ್ಲಿ ಹೈಕಮಾಂಡ್ ನಿರ್ದಿಷ್ಟ ಸೂಚನೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಬಿಜೆಪಿ ಕಾಂಗ್ರೆಸ್ನ ಬೆಳವಣಿಗೆಗಳನ್ನು ಕಂಡು ಜೆಡಿಎಸ್ ಪಕ್ಷದ ಸುರಯ್ಯ ಬಾನು ಅವರು ಕೂಡ ಈ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷೆ ಹೊಂದಿದ್ದಾರೆ.
ಈ ಬಾರಿ ಕ್ಷೇತ್ರದ ಶಾಸಕರು ಮತ್ತು ಲೋಕಸಭಾ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡರೂ ಬಿಜೆಪಿ ಮತ್ತು ಕಾಂಗ್ರೆಸ್ಗೆ ಸಮಬಲ ದೊರೆಯುತ್ತದೆಯೇ ಹೊರತು ಇಲ್ಲಿ ನಾಲ್ಕು ಮಂದಿ ಜೆಡಿಎಸ್ ಸದಸ್ಯರ ಪಾತ್ರವೇ ಪ್ರಮುಖದಾಗಿದೆ.
ಇನ್ನು ಕೇವಲ ಒಂದು ವರ್ಷ ಎರಡು ತಿಂಗಳ ಅವಧಿ ಮಾತ್ರ ಉಳಿದಿರುವ ಹಿನ್ನೆಲೆಯಲ್ಲಿ ಹಣಬಲವು ಕೂಡ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ.