ಮಡಿಕೇರಿ, ಆ. ೧೬: ಮಡಿಕೇರಿ ತಾಲೂಕಿನ ಭಾಗಮಂಡಲ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿ ಮಾಡುತ್ತಿದ್ದ ಜಾಲವನ್ನು ಕೊಡಗು ಜಿಲ್ಲಾ ಪೊಲೀಸರು ಬೇಧಿಸಿದ್ದು,, ಪ್ರಕರಣದ ಪ್ರಮುಖ ಆರೋಪಿ ಕಳೆದ ೧೫ ವರ್ಷಗಳಿಂದ ವಾಸವಿರುವುದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ಮೂಲತಃ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯವನಾದ ಸುರೇಶ್ ಎಂಬಾತ ಕಳೆದ ೧೫ ವರ್ಷಗಳಿಂದ ಸಣ್ಣಪುಲಿಕೋಟು ಗ್ರಾಮದಲ್ಲಿ ವಾಸವಿದ್ದು, ಇಲ್ಲಿನ ಯುವತಿಯನ್ನೇ ವಿವಾಹವಾಗಿದ್ದಾನೆ. ಈತ ಬಂದೂಕು ತಯಾರು ಮಾಡಿ ಮಾರಾಟ ಮಾಡುತ್ತಿರುವÀ ಬಗ್ಗೆ ಏಪ್ರಿಲ್ ತಿಂಗಳಲ್ಲಿ ಮಾಹಿತಿ ಸಿಕ್ಕಿದೆ. ನಾಲ್ಕೆöÊದು ತಿಂಗಳಿAದ ಆತನ ಚಲನವಲನದ ಬಗ್ಗೆ ಪೊಲೀಸ್ ಗುಪ್ತಚರ ತಂಡ ಕಣ್ಣಿಟ್ಟಿದ್ದು, ಆತನ ಬಳಿ ಮಾಲು ಇರುವುದು ಖಚಿತವಾದಾಗ ಮನೆ ಮೇಲೆ ದಾಳಿ ಮಾಡುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಸೂಚಿಸಲಾಯಿತು. ಅದರಂತೆ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಬಂದೂಕು ತಯಾರಿಸಲು ಬಳಸುತ್ತಿದ್ದ ಸಾಮಗ್ರಿಗಳು ಸೇರಿದಂತೆ ೨ ಎಸ್ಬಿಬಿಎಲ್ ನಾಡ ಬಂದೂಕು ಮತ್ತು ೧ ನಾಡ ಪಿಸ್ತೂಲು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಆರೋಪಿ ಸುರೇಶ್ನನ್ನು ವಿಚಾರಣೆಗೊಳಪಡಿಸಿದಾಗ ಮೂವರಿಗೆ ಬಂದೂಕು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಕರಿಕೆ ಚೆತ್ತುಕಾಯ ಗ್ರಾಮದ ಶಿವರಾಮ್, ಪಿರಿಯಾಪಟ್ಟಣ ನಿವಾಸಿ ಎಸ್.ರವಿ ಹಾಗೂ ಭಾಗಮಂಡಲ ದೊಡ್ಡಪುಲಿಕೋಟು ಗ್ರಾಮದ ಕೋಟಿ ಎಂಬವರುಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಮೂವರು ವನ್ಯಪ್ರಾಣಿ ಬೇಟೆಯ ಉದ್ದೇಶದಿಂದ ಕೋವಿ ಖರೀದಿಸಿರುವ ಸಾಧ್ಯತೆ ಯಿದ್ದು, ಹೆಚ್ಚಿನ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಭಾರತೀಯ ಶಸ್ತಾçಸ್ತç ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೋವಿಯೊಂದಕ್ಕೆ ತಲಾ ೩೦ ಸಾವಿರದಂತೆ ಮಾರಾಟ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.
ಮಡಿಕೇರಿ ಉಪವಿಭಾಗ ಡಿಎಸ್ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ, ಎಎಸ್ಐ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆಂದು ಎಸ್ಪಿ ಶ್ಲಾಘನೆ ವ್ಯಕ್ತಪಡಿಸಿದರು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು, ಅಕ್ರಮ ಚಟುವಟಿಕೆಗಳು ಕಂಡುಬAದಲ್ಲಿ ಪೊಲೀಸರ ಗಮನಕ್ಕೆ ತರುವಂತೆ ಅವರು ಕೋರಿದ್ದಾರೆ.