ಕಣಿವೆ, ಆ. ೧೬: ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಇತ್ತೀಚೆಗೆ ಕೈಮಗ್ಗ ದಿನಾಚರಣೆಯನ್ನು ಸೋಮವಾರ ಪೇಟೆ ಮಂಡಲದ ವತಿಯಿಂದ ಆಚರಿಸಲಾಯಿತು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಸವನಹಳ್ಳಿಯ ಮಹಿಳಾ ನೇಕಾರರಾದ ಪುಷ್ಪಾ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಮಹಿಳಾ ಮೋರ್ಚಾದ ಉಸ್ತುವಾರಿ ಭವ್ಯ, ಸಂಚಾಲಕರಾದ ಗೀತಾ, ಪವಿತ್ರ, ಸಹ ಸಂಚಾಲಕರಾದ ತಂಗಮ್ಮ, ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ನಾಗೇಶ್, ಶಿಲ್ಪ ಅಪ್ಪಣ್ಣ. ಕಾರ್ಯದರ್ಶಿ ಡಾಟಿ, ಮಂಡಲ ಅಧ್ಯಕೆÀ್ಷ ಕವಿತಾ ವಿರೂಪಾಕ್ಷ, ಪ್ರಧಾನ ಕಾರ್ಯದರ್ಶಿ ಗೀತಾ, ಸೌಮ್ಯ ಸೇರಿದಂತೆ ಗುಡ್ಡೆಹೊಸೂರು ಗ್ರಾ.ಪಂ. ಆಡಳಿತ ಮಂಡಳಿಯ ಸದಸ್ಯರಿದ್ದರು.