ಚೆಯ್ಯಂಡಾಣೆ, ಆ. ೧೬: ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಮುಖ್ಯ ಶಿಕ್ಷಕರಾಗಿ ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪಿ.ಎ. ಚಂದ್ರಕಲಾ ಹಾಗೂ ಇದೇ ಶಾಲೆಯ ಸಹ ಶಿಕ್ಷಕರಾಗಿ ೨೦ ವರ್ಷ ಸೇವೆ ಸಲ್ಲಿಸಿದ ಎ.ಎಂ. ಎಲಿಜಬೆತ್ ಅವರು ನಿವೃತ್ತಿ ಹೊಂದಿದ್ದು ಇವರುಗಳನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಂಚಾಯಿತಿ ಆಡಳಿತ ವರ್ಗದವರು ಚಂದ್ರಕಲಾ ಹಾಗೂ ಎಲಿಜಬೆತ್ ಅವರಿಗೆ ಶಾಲು ಹೊದಿಸಿ, ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾವತಿ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸದಸ್ಯರಾದ ಮಾಚೆಟ್ಟಿರ ಕುಶು ಕುಶಾಲಪ್ಪ, ಮಹಮ್ಮದ್ ಖುರೇಶಿ, ಕುಲ್ಲೇಟಿರ ಅರುಣ್ ಬೇಬ, ಕೆ.ವೈ. ಅಶ್ರಫ್, ಕಾಳೆಯಂಡ ಸಾಬ ತಿಮ್ಮಯ್ಯ, ಟಿ.ಎ. ಮಹಮ್ಮದ್, ಅಶೋಕ, ಶಿವಚಾಳಿಯಂಡ ಜಗದೀಶ್, ಹೆಚ್.ಎಸ್. ಪಾರ್ವತಿ, ಕುಂದೈರೀರ ರೇಖಾ, ಯಶೋಧ, ಬಾಳೆಯಡ ಪುಷ್ಪ, ಅಮೀನಾ, ಬಿ.ಆರ್. ಲಲಿತಾ, ಶಶಿ ಮಂದಣ್ಣ, ಗಂಗಮ್ಮ, ಸಿಬ್ಬಂದಿಗಳಾದ ಬೊಪ್ಪಂಡ ವೇಣು, ತಂಗಮ್ಮ, ಪೌಸಿ, ಶರಳಿ, ಬಿಂದು ಉಪಸ್ಥಿತರಿದ್ದರು.