ಮಡಿಕೇರಿ, ಆ. ೧೬: ೬೬/೧೧ ಕೆ.ವಿ. ಶ್ರೀಮಂಗಲ ವಿದ್ಯುತ್ ವಿತರಣಾ ಕೇಂದ್ರದ ಬಿರುನಾಣಿ ಫೀಡರ್‌ನ ನಿರ್ವಹಣಾ ಕಾಮಗಾರಿಯನ್ನು ಹಮ್ಮಿ ಕೊಂಡಿರುವುದರಿAದ ತಾ. ೧೭ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತ ಗೊಳಿಸಲಾಗುವುದು. ಆದ್ದರಿಂದ ಬಿರುನಾಣಿ, ಪೂಕೊಳ, ಬಾಡಗರಕೇರಿ ಹಾಗೂ ತೆರಾಲು ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚೆಸ್ಕಾಂ ಕೋರಿದೆ.