ಹೊದ್ದೂರು: ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ಆವರಣದಲ್ಲಿರುವ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನಗಳು ನಡೆದವು.

ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನದವರೆಗೆ ಅರ್ಚಕ ಶ್ರೀಕಾಂತ್ ಭಟ್ಟರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷಾ ಬಲಿಪೂಜೆ ಹಾಗೂ ಪಂಚಾಮೃತಭಿಷೇಕ ಪೂಜೆ ನಡೆಯಿತು. ನೆರೆದಿದ್ದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚವುರೀರ ಮೇದಪ್ಪ, ಕಾರ್ಯದರ್ಶಿ ಹಾಗೂ ತಕ್ಕರಾದ ನೆರವಂಡ ಸಂಜಯ್ ಪೂಣಚ್ಚ, ಸದಸ್ಯರು, ಹೆಚ್ಚಿನ ಸಂಖ್ಯೆಯ ಭಕ್ತರು ಹಾಜರಿದ್ದು, ದೇವರ ತೀರ್ಥಪ್ರಸಾದ ಸ್ವೀಕರಿಸಿದರು.

* ಹೊದ್ದೂರು: ಹೊದ್ದೂರು ಗ್ರಾಮದ ಶ್ರೀ ಶಾಸ್ತ - ಈಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಅವರ ಕಾಫಿ ತೋಟದಲ್ಲಿ ನೆಲೆ ನಿಂತಿರುವ ನಾಗಸ್ಥಾನದಲ್ಲ್ಲಿ ವಿಶೇಷ ಪೂಜಾ ಕಾರ್ಯ ನಡೆದವು.

ಅರ್ಚಕ ಜಯರಾಜ್ ಭಟ್ಟರ ಮುಂದಾಳತ್ವದಲ್ಲಿ ನಾಗನ ಕಲ್ಲಿಗೆ ಹಾಲು, ಎಳನೀರು ಅಭಿಷೇಕ ಸೇರಿದಂತೆ ಹಣ್ಣುಕಾಯಿ ಪೂಜೆಯನ್ನು ನೇರವೇರಿಸಲಾಯಿತು.ಮಡಿಕೇರಿ: ನಾಗರ ಪಂಚಮಿ ಪ್ರಯುಕ್ತ ನಗರದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದ ನಾಗಬನದಲ್ಲಿ ನಾಗನಿಗೆ ಅಭಿಷೇಕ, ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕರಾದ ಸತ್ಯೇಶ್ ಭಟ್ ನೇತೃತ್ವದಲ್ಲಿ ನಡೆಯಿತು. ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಹಾಜರಿದ್ದರು.