ಚೆಯ್ಯಂಡಾಣೆ, ಆ. ೧೪: ವೀರಾಜಪೇಟೆ-ನಾಪೋಕ್ಲು ಮುಖ್ಯ ರಸ್ತೆಯ (ರಾಜ್ಯ ಹೆದ್ದಾರಿ ಎಸ್.ಎಚ್- ೯೦) ಚೆಯ್ಯಂಡಾಣೆಯಿAದ ಕಡಂಗದವರೆಗೆ ೬ ಕಿ.ಮೀ. ವ್ಯಾಪ್ತಿಯ ರಸ್ತೆ ಹದಗೆಟ್ಟು ೨೦ ವರ್ಷಗಳೇ ಕಳೆದರು ರಸ್ತೆ ದುರಸ್ತಿ ಮಾತ್ರ ನಡೆಯುತ್ತಿಲ್ಲ.
ಗುಂಡಿ ಬಿದ್ದ ರಸ್ತೆಯಲ್ಲಿ ನೀರು ತುಂಬಿ ಹಲವಾರು ಅವಘಡಗಳು ಸಂಭವಿಸಿದ ಉದಾಹರಣೆಗಳಿಗೆ ಇದೆ ರಸ್ತೆಯಲ್ಲಿ, ರಸ್ತೆಯ ಉಭಯ ಕಡೆಗಳಲ್ಲಿ ಕಾಡು ಕಡಿಯದೆ ಮತ್ತೊಂದು ಗೋಳು, ಕರಡ ಸೇತುವೆ ಮೇಲೆ ಕಾಡುಗಳು ಬೆಳೆದು ನಿಂತಿವೆ, ರಸ್ತೆಯ ಬದಿಯಲ್ಲಿರುವ ಬರೆಗಳು ಜರಿದು ಚರಂಡಿ ಮುಚ್ಚಿ ನೀರು ರಸ್ತೆಯಲ್ಲಿ ಶೇಖರಣೆಯಾಗುತ್ತಿದೆ, ಈ ರಸ್ತೆ ಮೈಸೂರು, ಹುಣಸೂರು, ಭಾಗಮಂಡಲ, ಕರಿಕೆ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.
ತಲಕಾವೇರಿ, ಭಾಗಮಂಡಲ, ಇಗ್ಗುತಪ್ಪ ದೇವಸ್ಥಾನ, ಎಮ್ಮೆಮಾಡು ದರ್ಗಾ ಹಾಗೂ ಪ್ರವಾಸಿ ತಾಣವಾದ ನಾಲ್ಕುನಾಡು ಅರಮನೆ, ಚೇಲಾವರ ಜಲಪಾತ, ತಡಿಯಂಡಮೋಳ್ ಬೆಟ್ಟ, ಕಬ್ಬೆಬೆಟ್ಟ, ಚೋಮಕುಂದ್ ಹೀಗೆ ಹಲವಾರು ಸ್ಥಳಗಳಿಗೆ ಸಾವಿರಾರು ಪ್ರವಾಸಿಗರ ಹಾಗೂ ಯಾತ್ರಿಕರ ವಾಹನ ತೆರಳಬೇಕಾದರೆ ಇದೆ ರಸ್ತೆಯಲ್ಲೆ ತೆರಳಬೇಕಾಗುತ್ತದೆ.
ವಿದ್ಯಾರ್ಥಿಗಳ ಗೋಳು
ಇದೆ ರಸ್ತೆಯಲ್ಲಿ ವೀರಾಜಪೇಟೆ, ಗೋಣಿಕೊಪ್ಪ, ನಾಪೋಕ್ಲು, ಕಕ್ಕಬೆ, ಕಡಂಗ, ಅರಮೇರಿ ಶಾಲಾ ವಾಹನ ಹಾಗೂ ಖಾಸಗಿ ಬಸ್ಗಳು, ಸರಕಾರಿ ಬಸ್ಗಳು ಸಂಚರಿಸುತ್ತಿದ್ದು, ಇದರಲ್ಲಿ ದಿನನಿತ್ಯ ಸಂಚರಿಸುವ ಶಾಲಾ ವಿದ್ಯಾರ್ಥಿಗಳ ಗೋಳು ಹೇಳತೀರದು. ಗುಂಡಿಮಯವಾದ ರಸ್ತೆಯಿಂದ ವಿದ್ಯಾರ್ಥಿಗಳು ತಡವಾಗಿ ಶಾಲೆಗೆ ತಲುಪುವಂತಾಗಿದೆ.
ಸೇತುವೆ ಮೇಲೆ ಕಾಡು
ಇದೆ ಮಾರ್ಗದ ಕರಡ ಸೇತುವೆ ಮೇಲ್ಗಡೆ ಕಾಡು ಬೆಳೆದು, ನೀರು ಸೇತುವೆ ಮೇಲೆ ಶೇಖರಣೆ ಗೊಳ್ಳುತ್ತಿದೆ ನೀರು ಶೇಖರಣೆಗೊಂಡು ಸೇತುವೆ ದುಸ್ಥಿತಿ ತಲುಪುತ್ತಿದೆ.
ಕರಡ ಪಟ್ಟಣದಿಂದ ಮುಂದಕ್ಕೆ ಮುಖ್ಯ ರಸ್ತೆಯ ಬದಿಯಲ್ಲಿ ಮಣ್ಣು ತಂದು ಸುರಿದು ಶೇಖರಿಸಿದ್ದು ಅಲ್ಲಿ ಕೂಡ ನೀರು ರಸ್ತೆಯಲ್ಲಿಯೇ ಶೇಖರಣೆಗೊಂಡಿದೆ. ಅಪಘಾತಕ್ಕೆ ಆಹ್ವಾನ ನೀಡುವಂತಿದೆ. ಪೊದ್ದಮಾನಿ ಕೆರೆಯ ಸಮೀಪ ನೀರು ರಸ್ತೆಯಲ್ಲಿ ಹರಿದು ಬೃಹತ್ ಗುಂಡಿಗಳು ಸೃಷ್ಟಿಯಾಗಿವೆ. ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತಿದೆ, ಇದೆ ರೀತಿಯಾದರೆ ಈ ರಸ್ತೆಯ ಮಧ್ಯದಲ್ಲಿರುವ ಬೃಹತ್ ಗುಂಡಿಗಳಲ್ಲಿ ವಾಹನ ಸಿಲುಕಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಳೆದ ಬಾರಿಯ ಮಳೆಗೆ ಕರಡ ಸೇತುವೆ ಸಮೀಪ ಜಲಸ್ಫೋಟವಾಗಿ ಬಸ್ ಹಾಗೂ ಕೆಲವು ವಾಹನಗಳು ರಸ್ತೆಯಲ್ಲಿಯೇ ಹೂತು ಹೋಗಿದ್ದವು. ನಂತರ ಆ ಸ್ಥಳದಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕಲಾಗಿತ್ತು. ಅಲ್ಲಿ ಬರೆ ಕುಸಿದು ಅದರ ಮಣ್ಣು ಚರಂಡಿಯಲ್ಲಿ ತುಂಬಿದ್ದು ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿ ಶೇಖರಣೆಗೊಳ್ಳುತ್ತಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಇಷ್ಟೆಲ್ಲ ತೊಂದರೆ ಈ ರಸ್ತೆಯಲ್ಲಿ ಇದ್ದರು ಕೂಡ ಯಾವುದೇ ಇಲಾಖೆಯಾಗಲಿ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಕೂಡಲೇ ಸಂಬAಧ ಪಟ್ಟ ಇಲಾಖೆ ಚೆಯ್ಯಂಡಾಣೆ-ಕಡAಗ ರಾಜ್ಯ ಹೆದ್ದಾರಿ ರಸ್ತೆಯನ್ನು ಅಭಿವೃದ್ಧಿ ಪಡಿಸಿಕೊಡಿ ಎಂಬುದು ಇಲ್ಲಿನ ಗ್ರಾಮಸ್ಥರ, ಸಾರ್ವಜನಿಕರ, ವಾಹನ ಸವಾರರ, ವಿದ್ಯಾರ್ಥಿಗಳ ಕೋರಿಕೆಯಾಗಿದೆ.
-ಅಶ್ರಫ್ ಚೆಯ್ಯಂಡಾಣೆ