ಮಡಿಕೇರಿ, ಆ ೧೩: ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯನ್ನು ಅನುಸರಿಸಿ ಮುನ್ನುಗ್ಗುತ್ತಿರುವ ರೋಟರಿ ಇದೇ ಕಾರಣದಿಂದಾಗಿಯೇ ವಿಶ್ವದ ಪ್ರಮುಖ ಸೇವಾ ಸಂಸ್ಥೆಯಾಗಿ ೧೧೯ ವರ್ಷಗಳಿಂದಲೂ ಮುನ್ನಡೆದಿದೆ ಎಂದು ಮುಂಬೈನ ರೋಟರಿ ಪ್ರಮುಖ ಡಾ. ದೀಪಕ್ ಪುರೋಹಿತ್ ಹೇಳಿದ್ದಾರೆ.

೭ ನೇ ಹೊಸಕೋಟೆಯ ಸಂತ ಸಬಾಸ್ಟಿನ್ ಚರ್ಚ್ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯಿAದ ಆಯೋಜಿತ ರೋಟರಿ ಸದಸ್ಯತ್ವ ಮತ್ತು ಪಬ್ಲಿಕ್ ಇಮೇಜ್ ಸಮಾವೇಶವಾದ ವಿಸ್ತಾರ ಉದ್ಘಾಟಿಸಿ ಮಾತನಾಡಿದ ಡಾ, ದೀಪಕ್ ಪುರೋಹಿತ್, ರೋಟರಿಯಲ್ಲಿ ಪ್ರಸ್ತುತ ೧೧,೩೪ ಲಕ್ಷ ಸದಸ್ಯರು ವಿಶ್ವವ್ಯಾಪಿ ಇದ್ದಾರೆ, ಕಳೆದ ವರ್ಷದ ಜುಲೈನಿಂದ ಈವರೆಗೂ ೧೯,೪೦೦ ಹೊಸ ಸದಸ್ಯರನ್ನು ರೋಟರಿ ಹೊಂದಿದೆ, ೩೬,೮೬೦ ರೋಟರಿ ಕ್ಲಬ್ ಗಳು ಜಗತ್ತಿನಲ್ಲಿವೆ, ರೋಟರಿ ಸದಸ್ಯರ ಪೈಕಿ ಶೇ, ೨೬ ರಷ್ಟು ಮಹಿಳಾ ಸದಸ್ಯರಿರುವುದು ಹೆಗ್ಗಳಿಕೆಯಾಗಿದೆ ಎಂದು ಮಾಹಿತಿ ನೀಡಿದರು, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಹೊಸಬ್ಬರು ರೋಟರಿ ಸದಸ್ಯರಾಗಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ರೋಟರಿ ಮಾಜಿ ಗವರ್ನರ್ ಹೊಸಪೇಟೆಯ ಗೋಪಿನಾಥ್ ಮಾತನಾಡಿ, ರೋಟರಿಯಲ್ಲಿ ಜನಸೇವೆಗಾಗಿ ಅತ್ಯುತ್ತಮ ಯೋಜನೆಗಳಿಗೆ ಎಂದಿಗೂ ಅನುದಾನದ ಕೊರತೆ ಭಾದಿಸದು, ಜಗತ್ತಿನ ಎಲ್ಲಿಂದಲೇ ಆದರೂ ಯೋಜನೆಗಳಿಗೆ ಹಣದ ನೆರವು ದೊರಕುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು,

ರೋಟರಿ ಮಾಜಿ ಗವರ್ನರ್ ಚೆನ್ನೆöÊನ ಮುನಿ ಗಿರೀಶ್ ಪಬ್ಲಿಕ್ ಇಮೇಜ್ ರೋಟರಿಗೆ ಅತ್ಯಂತ ಅಗತ್ಯವಾಗಿದ್ದು ಸಾಮಾಜಿಕ ಸೇವಾ ವಲಯದಲ್ಲಿ ರೋಟರಿ ಯೋಜನೆ ಗಳನ್ನು ಕೇಂದ್ರೀಕರಿಸಿ ವಿನೂತನ ಕಾರ್ಯಯೋಜನೆ ಜಾರಿಗೊಳಿಸಿದರೆ ಸಾರ್ವಜನಿಕರ ಪ್ರಶಂಸೆ ಖಂಡಿತಾ ಎಂದು ಕಿವಿಮಾತು ಹೇಳಿದರು,

ರೋಟರಿ ಜಿಲ್ಲೆ ೩೧೮೧ನ ಗವರ್ನರ್ ವಿಕ್ರಂದತ್ತ ಮಾತನಾಡಿ, ರೋಟರಿಯಂಥ ಸೇವಾ ಸಂಸ್ಥೆಗೆ ಸೇರಲು ಸಮಯ ಇಲ್ಲ ಎಂಬುದು ಸರಿಯಾದ ವಾದ ಅಲ್ಲ. ಸಮಾಜಸೇವೆ ಮಾಡಲು ಪ್ರತೀಯೋರ್ವರೂ ಸಮಯ ಮಾಡಿಕೊಂಡಲ್ಲಿ ಖಂಡಿತಾ ಅಂಥವರಿಗೆ ರೋಟರಿ ಸೂಕ್ತ ಅವಕಾಶ ನೀಡುತ್ತದೆ ಎಂದರು. ಇದೇ ಸಂದರ್ಭ ರೋಟರಿ ಸದಸ್ಯತ್ವ ಕುರಿತ ಸಂವಾದದಲ್ಲಿ ರೋಟರಿ ಪ್ರಮುಖರಾದ ಅನಿಲ್ ಎಚ್.ಟಿ. ಬಿ.ಜಿ.ಅನಂತಶಯನ, ಡಾ. ಸಿ.ಆರ್.ಪ್ರಶಾಂತ್, ರಾಘವೇಂದ್ರ, ಜಗದೀಶ್, ರಚನಾ ನಾಗೇಶ್, ಪಿ. ಆರ್. ಭಟ್ ಪಾಲ್ಗೊಂಡಿದ್ದರು.

ರೋಟರಿ ಜಿಲ್ಲೆ ೩೧೮೧ ನ ಮಾಜಿ ಗವರ್ನರ್ ಗಳಾದ ಸುರೇಶ್ ಚಂಗಪ್ಪ, ಡಾ, ರವಿ ಅಪ್ಪಾಜಿ, ರವೀಂದ್ರ ಭಟ್, ಡಾ, ನಾಗಾರ್ಜುನ, ದೇವದಾಸ್ ರೈ, ಪ್ರಕಾಶ್ ಕಾರಂತ್, ಕೃಷ್ಣ, ಮುಂದಿನ ಸಾಲಿನ ಗವರ್ನರ್ ರಾಮಕೃಷ್ಣ, ನಿಯೋಜಿತ ಗವರ್ನರ್ ಸತೀಶ್ ಬೋಳಾರ್, ಕುಶಾಲನಗರ ರೋಟರಿ ಅಧ್ಯಕ್ಷ ಸಿ.ಬಿ. ಹರೀಶ್, ವಲಯ ೬ರ ಸಹಾಯಕ ಗವರ್ನರ್ ಡಾ, ಹರಿಶೆಟ್ಟಿ, ಸಮ್ಮೇಳನ ಸಮಿತಿ ಅಧ್ಯಕ್ಷ ಪಿ.ಆರ್. ನವೀನ್ ಸಮ್ಮೇಳನದ ವೇದಿಕೆಯಲ್ಲಿದ್ದರು.

ಅತ್ಯಧಿಕ ಸದಸ್ಯರ ನೋಂದಣಿಗಾಗಿ ಮಡಿಕೇರಿಯ ರೋಟರಿ ವುಡ್ಸ್ ಮತ್ತು ಸೋಮವಾರಪೇಟೆ ರೋಟರಿ ಹಿಲ್ಸ್, ಕೊಡ್ಲಿಪೇಟೆ ರೋಟರಿ ಸಂಸ್ಥೆಗಳಿಗೆ ಪ್ರಶಂಸನ ಪತ್ರ ನೀಡಲಾಯಿತು.