ಗುಡ್ಡೆಹೊಸೂರು, ಆ. ೧೩ : ಇಲ್ಲಿಗೆ ಸಮೀಪದ ದೊಡ್ಡಬೆಟ್ಟಗೇರಿ ಗ್ರಾಮದ ನಿವಾಸಿ ಕುಡೆಕಲ್ ಗಣೇಶ್ ಮತ್ತು ಚಿದಾನಂದ ಅವರು ತಲಾ ಒಂದು ಎಕರೆ ವ್ಯಾಪ್ತಿಯಲ್ಲಿ ಜೋಳ ಬೆಳೆ ಬೆಳೆದಿದ್ದು, ಈ ಬೆಳೆಯನ್ನು ಆನೆ ನಿರಂತರ ದಾಳಿ ನಡೆಸಿ ನಾಶಪಡಿಸುತ್ತಿದೆ. ಭತ್ತದ ಗದ್ದೆ, ಕಾಫಿ, ಬಾಳೆ ತೋಟಗಳಿಗೆ ಒಂಟಿಸಲಗ ದಾಳಿ ನಡೆಸಿ ಬೆಳೆ ನಾಶಪಡಿಸುತ್ತಿದೆ. ವಾರಕ್ಕೆ ಮೂರು ಬಾರಿ ಬಂದು ನಷ್ಟಪಡಿಸುತ್ತಿದೆ. ಮನೆಯ ಅಂಗಳಕ್ಕೆ ಬಂದು ಸುತ್ತಮುತ್ತಲಿನ ತೆಂಗಿನ ಮರ, ಬಾಳೆ ಗಿಡಗಳನ್ನು ತಿಂದು ತುಳಿದು ನಾಶಪಡಿಸುತ್ತದೆ ಎಂದು ಕುಡೆಕ್ಕಲ್ ಸುಂದರ ದೂರಿಕೊಂಡಿದ್ದಾರೆ.
ಈ ಸಂಬAಧ ಕುಶಾಲನಗರ ವಲಯ ಅರಣ್ಯಧಿಕಾರಿ ರತನ್ ಕುಮಾರ್ ಅವರಿಗೆ ದೂರು ನೀಡಲಾಗಿದೆ. ಉಪಅರಣ್ಯಾಧಿಕಾರಿ ದೇವಯ್ಯ ಮತ್ತು ಸಿಬ್ಬಂದಿಗಳಾದ ಕುಡ್ಲಪ್ಪ, ಮೇದಪ್ಪ ಅವರುಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೂಕ್ತ ಪರಿಹಾರದ ಜೊತೆಗೆ ಇನ್ನೂ ಮುಂದೆ ರೈತರ ಜಮೀನುಗಳಿಗೆ ಆನೆ ದಾಳಿ ನಡೆಸದಂತೆ ಇಲಾಖೆಯ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ವಿಭಾಗದ ರೈತರಾದ ಮೂಲೆಮಜಲು ಭರತ್, ತಿಮ್ಮಯ್ಯ, ಶಾಂತೆಯAಡ್ರ ಅಯ್ಯಪ್ಪ ಮುಂತಾದವರು ದೂರಿಕೊಂಡಿದ್ದಾರೆ.