ಗೋಣಿಕೊಪ್ಪಲು. ಆ.೧೩: ಎಂದಿನAತೆ ತನ್ನ ಅಂಗಡಿ ಯಲ್ಲಿ ಕುಳಿತು ಗ್ರಾಹಕ ರೊಂದಿಗೆ ತನ್ನ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಉದ್ಯಮಿಯೊಬ್ಬರು ಸಾವನ್ನ ಪ್ಪಿದ ಘಟನೆ ಗೋಣಿಕೊಪ್ಪದಲ್ಲಿ ನಡೆದಿದೆ.

ಗೋಣಿಕೊಪ್ಪ - ಪೊನ್ನಂಪೇಟೆ ಮುಖ್ಯ ರಸ್ತೆಯ ಬದಿಯಲ್ಲಿರುವ ಮಂಜುನಾಥ ಟ್ರೇಡರ್ಸ್ ಪಾಲುದಾರರಾದ ನಾಗಿ ರೆಡ್ಡಿ (೫೫) ಎಂಬುವವರೇ ವಿಧಿಯ ಅಟ್ಟಹಾಸಕ್ಕೆ ಸಿಲುಕಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ

ಜೀವ ತೆತ್ತವರಾಗಿದ್ದಾರೆ.

ಮಂಗಳವಾರ ಮುಂಜಾನೆ ೯.೪೦ರ ಸಮಯದಲ್ಲಿ ತಮ್ಮ ಅಂಗಡಿಗೆ ಬಂದಿರುವ ನಾಗಿರೆಡ್ಡಿ ವ್ಯಾಪಾರದಲ್ಲಿ ತೊಡಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಸಮೀಪದಲ್ಲಿಯೇ ಸಹೋದರ ಇನ್ನೊಂದು ಕುರ್ಚಿಯಲ್ಲಿ ಕುಳಿತುಕೊಂಡಿದ್ದರು.

ಈ ಸಂದರ್ಭ ನಾಗಿರೆಡ್ಡಿಯವರಿಗೆ ದಿಢೀರ್ ಹೃದಯಾಘಾತ ಉಂಟಾಗಿ ಇನ್ನೇನು ಕೆಳಗೆ ಬೀಳುತ್ತಿದ್ದಂತೆಯೇ, ಸಹೋದರ ಮುಂದಾಗಿ ಅಣ್ಣನ ನೆರವಿಗೆ ಧಾವಿಸಿ ಕೂಡಲೇ ಸಮೀಪದ ಗೋಣಿಕೊಪ್ಪಲು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಈ ಬಗ್ಗೆ ಅಂಗಡಿಯ ಸಿಸಿ ಟಿವಿ ಯಲ್ಲಿ ಚಿತ್ರ ಸೆರೆಯಾಗಿದೆ. ನಾಲ್ಕು ಸಹೋದರರು ಸೇರಿ ಉದ್ಯಮ ನಡೆಸುವ ಮೂಲಕ ಜನಾನುರಾಗಿಯಾಗಿದ್ದರು.

ಮೂಲತಃ ಆಂಧ್ರಪ್ರದೇಶದವರಾಗಿದ್ದರೂ, ಹಲವು ದಶಕಗಳಿಂದ ಸಹೋದರರು ಕೂಡು ಕುಟುಂಬವಾಗಿದ್ದುಕೊAಡು ಗೋಣಿಕೊಪ್ಪಲುವಿನಲ್ಲಿ ಸಂಸಾರ ನಡೆಸುತ್ತಾ, ತಮ್ಮ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.ನೆರವಿಗೆ ಧಾವಿಸಿ ಕೂಡಲೇ ಸಮೀಪದ ಗೋಣಿಕೊಪ್ಪಲು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಈ ಬಗ್ಗೆ ಅಂಗಡಿಯ ಸಿಸಿ ಟಿವಿ ಯಲ್ಲಿ ಚಿತ್ರ ಸೆರೆಯಾಗಿದೆ. ನಾಲ್ಕು ಸಹೋದರರು ಸೇರಿ ಉದ್ಯಮ ನಡೆಸುವ ಮೂಲಕ ಜನಾನುರಾಗಿಯಾಗಿದ್ದರು.

ಮೂಲತಃ ಆಂಧ್ರಪ್ರದೇಶದವರಾಗಿದ್ದರೂ, ಹಲವು ದಶಕಗಳಿಂದ ಸಹೋದರರು ಕೂಡು ಕುಟುಂಬವಾಗಿದ್ದುಕೊAಡು ಗೋಣಿಕೊಪ್ಪಲುವಿನಲ್ಲಿ ಸಂಸಾರ ನಡೆಸುತ್ತಾ, ತಮ್ಮ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.