ಮಡಿಕೇರಿ, ಆ. ೧೩: ಬೆಟ್ಟಗೇರಿ ಶ್ರೀ ಓಂಕಾರ ಯುವಕ ಸಂಘದ ವತಿಯಿಂದ ೩ನೆ ವರ್ಷದ ಹಿಂದೂ ಕಪ್ ಕೆಸರುಗದ್ದೆ ಕ್ರೀಡಾಕೂಟ ತಾ.೧೭, ೧೮ ರಂದು ನಡೆಯಲಿದೆ.
ಅರವತ್ತೋಕ್ಲು(ಅಪ್ಪಂಗಳ)ವಿನ ಶ್ರೀಪತಿ ಹೆಬ್ಬಾರ್ ಅವರ ಗದ್ದೆಯಲ್ಲಿ ಬೆಳಿಗ್ಗೆ ೮:೩೦ರಿಂದ ಸಂಜೆ ೫:೩೦ರವರೆಗೆ ೨ ದಿನಗಳ ಕಾಲ ಕ್ರೀಡಾಕೂಟಗಳು ನಡೆಯಲಿವೆ. ಕ್ರಿಕೆಟ್, ರಿಲೇ ಮುಂತಾದ ಕೆಸರುಗದ್ದೆ ಕ್ರೀಡೆಗಳು ನಡೆಯಲಿವೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.