ಮಡಿಕೇರಿ, ಆ. ೧೩: ಕೊಳಗದಾಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೮ ವರ್ಷ ಸೇರಿದಂತೆ ಒಟ್ಟು ೨೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪುಷ್ಪಕುಮಾರಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಇಲಾಖಾ ಅಧಿಕಾರಿ ವೀಣಾ, ಎಸ್ಡಿಎಂಸಿ ಅಧ್ಯಕ್ಷೆ ಸೌಮ್ಯ ಟಿ.ಟಿ., ಕೊಟ್ಟೂರು ಶಾಲಾ ಮುಖ್ಯ ಶಿಕ್ಷಕಿ ಮೀನಾಕ್ಷಿ ಎಂ.ಪಿ., ಚೇರಂಬಾಣೆ ಶಾಲೆಯ ಸಹ ಶಿಕ್ಷಕಿ ರೋಹಿಣಿ ಎ.ಯು. ಗ್ರಾ.ಪಂ. ಸದಸ್ಯೆ ಅನಿತಾ, ಎಸ್ಡಿಎಂಸಿ ಸದಸ್ಯರು, ಪೋಷಕರು, ಪಾಕ ದುರ್ಗಾ ಪರಮೇಶ್ವರಿ ಸ್ತಿçà ಶಕ್ತಿ ಸಂಘದ ಸದಸ್ಯರು ಮತ್ತು ನಿವೃತ್ತ ಶಿಕ್ಷಕಿಯ ಕುಟುಂಬದವರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.