ಮಡಿಕೇರಿ, ಆ. ೧೩: ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಕರುಗಳಾದ ದಿನೇಶ್ ಮತ್ತು ಪಾರ್ವತಿ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಾದ ಸುಮಿತ್ರಾ ಅವರು ಗೌರವಿಸಿದರು.

ಶಾಲೆಯ ರಿಂಕ್ ಹಾಕಿ ವಿಜೇತ ತಂಡದ ಆಟಗಾರರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

೨೦೧೨ ರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಹಾಕಿ ಕ್ರೀಡೆಯಲ್ಲಿ ಗೆಲುವಿನ ದಾರಿ ತೋರಿಸುತ್ತಿರುವ ದಿನೇಶ್ ಅವರು, ಈ ವರ್ಷವೂ ಶಾಲೆಯ ಹಾಕಿ ತಂಡವು ದಕ್ಷಿಣ ವಲಯದಲ್ಲಿ ಜಯಗಳಿಸುವ ಮೂಲಕ ರಾಷ್ಟಿçÃಯ ಮಟ್ಟದ ವಿಜೇತರಾಗಿ ಸಾಧನೆ ಮಾಡಲು ಕಾರಣರಾಗಿದ್ದಾರೆ.

ಈ ವರ್ಷ ಅವರ ಮಾರ್ಗ ದರ್ಶನದಲ್ಲಿ ಬಾಲಕರು ಮತ್ತು ಬಾಲಕಿಯರು ದ್ವಿತೀಯ ಸ್ಥಾನ ಪಡೆದು ಭೂಪಾಲದಲ್ಲಿ ನಡೆಯುವ ರಾಷ್ಟಿçÃಯ ಹಾಕಿ ಟೂರ್ನಿಗೆ ಸಜ್ಜಾಗಿದ್ದಾರೆ.

ಹಾಕಿ ಇಂಡಿಯಾ ಸೆಮಿನಾರ್ ನಲ್ಲಿ ಲೆವೆಲ್ ಒನ್ ತರಬೇತಿದಾರರಾಗಿ ಗುರುತಿಸಿಕೊಂಡಿರುವ ದಿನೇಶ್ ರಾಜ್ಯಮಟ್ಟದ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.