ಸಿದ್ದಾಪುರ, ಆ. ೧೩ : ಅಕ್ರಮವಾಗಿ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕರಿಬ್ಬರನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿ ಯಾಗಿದ್ದಾರೆ. ನೆಲ್ಯಹುದಿಕೇರಿ ಎಂ.ಜಿ. ಕಾಲೋನಿ ನಿವಾಸಿ ಪ್ರದೀಶ್ (೨೮), ನೆಲ್ಯಹುದಿಕೇರಿ ನಿವಾಸಿ ಫಾರೂಕ್ (೨೮) ಬಂಧಿತರು. ಮಾರಾಟ ಮಾಡಲೆಂದು ಅಕ್ರಮವಾಗಿ ವಾಹನದಲ್ಲಿ ಗಾಂಜಾ ಸಾಗಿಸುತ್ತಿರುವುದಾಗಿ ಸಿದ್ದಾಪುರ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅತ್ತಿಮಂಗಲದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ನೆಲ್ಯಹುದಿಕೇರಿಯ ಫಾರೂಕ್ ಎಂಬಾತನಿಗೆ ಸೇರಿದ ಟಾಟಾ ಏಸ್ ಗೂಡ್ಸ್ (ಕೆಎ೦೧ ಎಎಂ ೮೨೯೯) ವಾಹನದಲ್ಲಿ ೧೮ ಪ್ಯಾಕೆಟ್‌ಗಳಲ್ಲಿ ಒಟ್ಟು ೧೯೧ ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಕೂಡಲೇ ಆರೋಪಿಗಳಾದ ಪ್ರದೀಶ್ ಹಾಗೂ ಫಾರೂಕ್ ಎಂಬಿಬ್ಬರನ್ನು ವಾಹನ ಸಹಿತ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಸಂದÀರ್ಭದಲ್ಲಿ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ,ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವೇಂದ್ರ, ನೆಲ್ಯಹುದಿಕೇರಿ ಕೆ ಪಿ ಎಸ್ ಶಾಲೆಯ ಉಪಪ್ರಾಂಶುಪಾಲ ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.